ಹದಿಹರೆಯದ ಯುವಕ ಹಾಡಹಗಲೇ ಹುಲಿ ದಾಳಿಗೆ ಬಲಿ!

tiger
Published on

ಕೊಡಗು: ಕಾಡಿನ ಪ್ರಾಣಿಗಳು ನಾಡಿಗೆ ಬರುವ ಜತೆಗೆ ಸಾಕುಪ್ರಾಣಿಗಳು ಮತ್ತು ಮನುಷ್ಯರ ಮೇಲೆ ದಾಳಿ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಾವು-ನೋವು ಸಂಭವಿಸಿದ ಹಲವು ಉದಾಹರಣೆಗಳಿವೆ. ಚಿರತೆ, ಕಾಡಾನೆ, ಹುಲಿ ದಾಳಿಗೆ ನಾಡಿನ ಜನರು ಹೈರಾಣಾಗಿದ್ದು, ಕೆಲವೆಡೆ ಆತಂಕದಲ್ಲೇ ಕಾಲ ಕಳೆಯುವಂತಾಗಿದೆ.

ಇದರ ಮುಂದುವರಿದ ಭಾಗವಾಗಿ ಇಂದು ಹಾಡಹಗಲೇ ಹದಿಹರೆಯದ ಯುವಕನೊಬ್ಬ ಹುಲಿ ದಾಳಿಗೆ ಬಲಿಯಾಗಿದ್ದಾನೆ. ಕೊಡಗು ಜಿಲ್ಲೆಯ ವೀರಹೊಸನಹಳ್ಳಿ ಸೊಳ್ಳೆಪುರ ನಿವಾಸಿ ಚೇತನ್​ (18) ಸಾವಿಗೀಡಾದ ಯುವಕ. ಪೊನ್ನಂಪೇಟೆ ತಾಲೂಕಿನ ಕುಟ್ಡ ಸಮೀಪದ ನಾಲ್ಕೇರಿ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ.

ಎನ್.ಪೂಣಚ್ಚ ಎಂಬವರಿಗೆ ಸೇರಿದ ತೋಟಕ್ಕೆ ಕಾಫಿ ಕೊಯ್ಲು ಮಾಡಲು ಚೇತನ್ ಬಂದಿದ್ದು, ಸಂಜೆ ನಾಲ್ಕು ಗಂಟೆಯ ಸುಮಾರಿಗೆ ಹುಲಿ ಮೈಮೇಲೆರಗಿದೆ. ತೋಟದ ಸಮೀಪ ಹುಲಿ ನಡೆಸಿದ ದಾಳಿಗೆ ಚೇತನ್ ಸಾವಿಗೀಡಾಗಿದ್ದಾನೆ. ಸ್ಥಳಕ್ಕೆ ನಾಗರಹೊಳೆ ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net