ನೂಪುರ್ ಶರ್ಮಾಗೆ ಬೆಂಬಲ ವ್ಯಕ್ತಪಡಿಸಿದ್ದಾತನ ತಲೆಯೇ ಕಟ್!; ಪ್ರಧಾನಿ ಮೋದಿಗೂ ಕೊಲೆ ಬೆದರಿಕೆ!

crime
Published on

ರಾಜಸ್ಥಾನ: ಬಿಜೆಪಿಯ ವಿವಾದಿತ ನಾಯಕಿ, ಧಾರ್ಮಿಕ ವಿಚಾರ ಕುರತಿ ಹೇಳಿಕೆಯಿಂದಾಗಿ ವಜಾಗೊಳಿಸಲ್ಪಟ್ಟಿರುವ ನೂಪುರ್ ಶರ್ಮಾಗೆ ಬೆಂಬಲ ವ್ಯಕ್ತಪಡಿಸಿದ್ದ ಯುವಕನ ತಲೆಯನ್ನೇ ಕತ್ತರಿಸಿ ಕೊಲೆ ಮಾಡಲಾಗಿದೆ. ಈತ ನೂಪುರ್ ಪರವಹಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದ ಕೆಲವೇ ದಿನಗಳಲ್ಲಿ ಇಬ್ಬರು ದುಷ್ಕರ್ಮಿಗಳು ಈ ಕೃತ್ಯವೆಸಗಿದ್ದಾರೆ.

ರಾಜಸ್ಥಾನದ ಉದಯಪುರದ ಮಲ್ಡಾಸ್ ಸ್ಟ್ರೀಟ್​ನಲ್ಲಿ ಇಂದು ಈ ಭೀಕರ ಕೊಲೆ ನಡೆದಿದೆ. ಕೊಲೆಯ ದೃಶ್ಯದ ವಿಡಿಯೋವನ್ನೂ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಈ ದುಷ್ಕರ್ಮಿಗಳು ಪ್ರಧಾನಿ ನರೇಂದ್ರ ಮೋದಿ ಪ್ರಾಣವನ್ನೂ ತೆಗೆಯವುದಾಗಿ ಬೆದರಿಕೆ ಒಡ್ಡಿದ್ದಾರೆ.

ಈ ಪ್ರಕರಣ ಬೆಳಕಿಗೆ ಬರುತ್ತಿದ್ದ ಕಠಿಣ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿರುವ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಸಾರ್ವಜನಿಕರು ಕಾನೂನುಬಾಹಿರವಾಗಿ ವರ್ತಿಸದೆ ಶಾಂತಿ ಸುವ್ಯವಸ್ಥೆ ಕಾಪಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ ಆ ಭಯಾನಕ ದೃಶ್ಯದ ವಿಡಿಯೋ ಹಂಚಿಕೊಳ್ಳದಂತೆ ಕೋರಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net