ಮಿಂಚಬೇಕಾದ್ದು ನೀವಲ್ಲ ನಿಮ್ಮ ಕೆಲಸ: ನೂತನ ಸಚಿವರಿಗೆ ಪ್ರಧಾನಿ ನರೇಂದ್ರ ಮೋದಿಯ ಕಿವಿಮಾತು

PM Modi
Published on

ನವದೆಹಲಿ: ಹೊಸ ಕೇಂದ್ರ ಸಚಿವ ಸಂಪುಟದೊಂದಿಗೆ ಗುರುವಾರ ರಾತ್ರಿ ಮೊದಲ ಸಭೆ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, "ನೀವು ಮಾಡುವಂತಹ ಕೆಲಸಗಳು ಮಿಂಚಬೇಕು ಹೊರತು ನೀವಲ್ಲ" ಎಂದು ಹೊಸ ಸಚಿವರಿಗೆ ಕಿವಿ ಮಾತು ಹೇಳಿದ್ದಾರೆ.

ಮಾಧ್ಯಮಗಳ ಮುಂದೆ ಅನವಶ್ಯಕ ಹೇಳಿಕೆಗಳನ್ನು ಕೊಡದಿರಿ ಬದಲಿಗೆ ಮಾಧ್ಯಮ ಶಕ್ತಿಯನ್ನು ಮಂತ್ರಿಮಂಡಲದ ಕಾರ್ಯಕ್ಕೆ ಸೇರಿಸಿಕೊಳ್ಳಿ ಎಂದು ಇದೇ ವೇಳೆ ಪ್ರಧಾನಿ ಮೋದಿ ಸಲಹೆ ನೀಡಿದ್ದಾರೆ.

ನೂತನ ಮಂತ್ರಿಗಳ ತಮ್ಮ ಹಿಂದಿನ ಅನುಭವಿ ಸಚಿವರನ್ನು ಭೇಟಿ ಮಾಡಲು ಮತ್ತು ಅವರ ಅನುಭವದಿಂದ ಕಲಿಯಲು ಪ್ರಧಾನಿ ಹೇಳಿದರು. ಸಂಪುಟದ ಭಾಗವಾಗಿರದವರು ಕೂಡ ಕೊಡುಗೆಗಳನ್ನು ನೀಡಿದ್ದಾರೆ. ಅವರಿಂದಲೂ ಹೊಸಬರು ಕಲಿಯಬಹುದೆಂದು ಪ್ರಧಾನಿ ಹೇಳಿದ್ದಾರೆ.

ಬೆಳಿಗ್ಗೆ 9.30 ರ ವೇಳೆಗೆ ಎಲ್ಲಾ ಸಚಿವರು ಸಮಯಪ್ರಜ್ಞೆಯೊಂದಿಗೆ ತಮ್ಮ ಕಚೇರಿಗಳನ್ನು ತಲುಪುವಂತೆ ಪ್ರಧಾನಿ ಕೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ.

ನೂತನ ಮಂತ್ರಿಗಳು ಜನರಲ್ಲಿ ಕರೊನಾ ಕುರಿತಾದ ಭಯವನ್ನು ಹುಟ್ಟುಹಾಕದೇ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಜನರನ್ನು ವಿನಂತಿಸಬೇಕೆಂದು ನೂತನ ಸಚಿವರಿಗೆ ಪ್ರಧಾನಿ ಪಾಠ ಮಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net