ಈ ಎಕ್ಸ್‌ಪ್ರೆಸ್‌ವೇ ಮತ್ತು ಹೆದ್ದಾರಿಗಳಲ್ಲಿ ನಿಮ್ಮ 'ಫಾಸ್ಟ್‌ಟ್ಯಾಗ್' ವಾರ್ಷಿಕ ಪಾಸ್ ಅನ್ವಯವಾಗುವುದಿಲ್ಲ| annual pass

fastag
Published on

ನವದೆಹಲಿ: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಆಗಸ್ಟ್ 15 ರಂದು ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್ ಅನ್ನು ದೇಶದೆಲ್ಲೆಡೆ ಜಾರಿಗೆ ತಂತು. ಇದು ಖಾಸಗಿ ಕಾರುಗಳು, ಜೀಪ್‌ಗಳು ಮತ್ತು ವ್ಯಾನ್‌ಗಳು ರಾಷ್ಟ್ರೀಯ ಹೆದ್ದಾರಿಗಳು ಮತ್ತು ರಾಷ್ಟ್ರೀಯ ಎಕ್ಸ್‌ಪ್ರೆಸ್‌ವೇಗಳಲ್ಲಿ ಒಂದು ವರ್ಷ ಅಥವಾ 200 ಟ್ರಿಪ್‌ಗಳವರೆಗೆ ಟೋಲ್-ಫ್ರೀ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ. ಮಾಲೀಕರು ಇದರ ಉಪಯೋಗ ಪಡೆಯಲು 2025–26 ವರ್ಷಕ್ಕೆ ರೂ.3,000 ಪಾವತಿಸಬೇಕಾಗುತ್ತದೆ. ರಾಜಮಾರ್ಗಯಾತ್ರೆ ಮೊಬೈಲ್ ಅಪ್ಲಿಕೇಶನ್ ಅಥವಾ NHAI ವೆಬ್‌ಸೈಟ್ ಮೂಲಕ ಪಾವತಿ ಮಾಡಬಹುದಾಗಿದೆ. ಪಾವತಿ ಮುಗಿದ ಬಳಿಕ ವಾರ್ಷಿಕ ಪಾಸ್ ಅನ್ನು ಸಕ್ರಿಯಗೊಳಿಸಲಾಗುತ್ತದೆ.

ಆದರೆ ಈ ಪಾಸ್ ರಾಷ್ಟ್ರೀಯ ಹೆದ್ದಾರಿಗಳು ಮತ್ತು ರಾಷ್ಟ್ರೀಯ ಎಕ್ಸ್‌ಪ್ರೆಸ್‌ವೇಗಳಲ್ಲಿನ ಟೋಲ್ ಪ್ಲಾಜಾಗಳಲ್ಲಿ ಮಾತ್ರ ಮಾನ್ಯವಾಗಿರುತ್ತದೆ. ರಾಜ್ಯ ಹೆದ್ದಾರಿಗಳು, ಸ್ಥಳೀಯ ರಸ್ತೆಗಳು, ಪಾರ್ಕಿಂಗ್ ಪ್ರದೇಶಗಳು ಅಥವಾ ರಾಜ್ಯ-ನಿರ್ವಹಣೆಯ ಎಕ್ಸ್‌ಪ್ರೆಸ್‌ವೇಗಳಂತಹ ಇತರ ಸ್ಥಳಗಳಲ್ಲಿ, ಫಾಸ್ಟ್‌ಟ್ಯಾಗ್ ಸಾಮಾನ್ಯ ಫಾಸ್ಟ್‌ಟ್ಯಾಗ್‌ನಂತೆ ಕಾರ್ಯನಿರ್ವಹಿಸುತ್ತದೆ.

ವಾರ್ಷಿಕ ಪಾಸ್ ವ್ಯಾಪ್ತಿಗೆ ಬಾರದ ರಸ್ತೆಗಳು:

ಮುಂಬೈ-ನಾಗ್ಪುರ ಎಕ್ಸ್‌ಪ್ರೆಸ್‌ವೇ

ಮೀರತ್ ಎಕ್ಸ್‌ಪ್ರೆಸ್‌ವೇ

ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇ

ಅಹಮದಾಬಾದ್–ವಡೋದರಾ ಎಕ್ಸ್‌ಪ್ರೆಸ್‌ವೇ

ಅಟಲ್ ಸೇತು

ಸಮೃದ್ಧಿ ಮಹಾಮಾರ್ಗ

ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ

ಈ ಎಕ್ಸ್‌ಪ್ರೆಸ್‌ವೇಗಳು NHAI ಗಿಂತ ರಾಜ್ಯ ಸಂಸ್ಥೆಗಳಿಂದ ನಿರ್ವಹಿಸಲ್ಪಡುವ ರಾಜ್ಯ ಹೆದ್ದಾರಿಗಳಾಗಿವೆ. ಫಾಸ್ಟ್​ಟ್ಯಾಗ್​ ವಾರ್ಷಿಕ ಪಾಸ್ ಅನ್ನು ನಿರ್ದಿಷ್ಟವಾಗಿ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಕೇಂದ್ರ ಪ್ರಾಧಿಕಾರದ ಅಡಿಯಲ್ಲಿರುವ ಎಕ್ಸ್‌ಪ್ರೆಸ್‌ವೇಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಹಾಗಾಗಿ ರಾಜ್ಯ-ನಿರ್ವಹಣೆಯ ಮಾರ್ಗಗಳಲ್ಲಿನ ಟೋಲ್‌ಗಳನ್ನು ಯೋಜನೆಯಲ್ಲಿ ಸೇರಿಸಲಾಗಿಲ್ಲ.

ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇ

ದ್ವಾರಕಾ ಎಕ್ಸ್‌ಪ್ರೆಸ್‌ವೇ

ಯಮುನಾ ಎಕ್ಸ್‌ಪ್ರೆಸ್‌ವೇ

ಪ್ರಮುಖ ನಿಯಮಗಳು

  • ಖಾಸಗಿ ವಾಹನಗಳಿಗೆ ಮಾತ್ರ ಅನ್ವಯ. ವಾಣಿಜ್ಯ ವಾಹನಗಳಿಗೆ ಮಾನ್ಯವಿಲ್ಲ.
  • ವರ್ಗಾವಣೆಗೆ ಅವಕಾಶವಿಲ್ಲ, ಮರುಪಾವತಿ ಮಾಡಲಾಗದ- ನೋಂದಾಯಿತ ವಾಹನಗಳಿಗೆ ಮಾತ್ರ ಮಾನ್ಯ.
  • ಸೀಮಿತ ವ್ಯಾಪ್ತಿ. ಅರ್ಹ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳಲ್ಲಿ ಮಾತ್ರ ಮಾನ್ಯ.
  • ಸ್ವಯಂ ನವೀಕರಣವಿಲ್ಲ. ಅವಧಿ ಮುಗಿದ ಬಳಿಕ ಬಳಕೆದಾರರು ಮತ್ತೆ ಹೊಸದಾಗಿ ಅರ್ಜಿ ಸಲ್ಲಿಸಬೇಕು,

(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net