

ಬಾಗಲಕೋಟೆ : ಅಪ್ರಾಪ್ತ ಬಾಲಕನೋರ್ವ ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ ಆರೋಪ ಇಳಕಲ್ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಇದೀಗ ಆ ಬಾಲಕಿ ಎರಡು ತಿಂಗಳ ಗರ್ಭಿಣಿಯಾಗಿದ್ದು, ಈ ಸಂಬಂಧ ಇಳಕಲ್ ಗ್ರಾಮೀಣ ಠಾಣೆಯಲ್ಲಿ ಪೊಕ್ಸೊ ಕೇಸ್ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇಬ್ಬರು ಕೂಡ ಈ ಹಿಂದೆ ಇಳಕಲ್ ತಾಲೂಕಿನ ವಸತಿ ಶಾಲೆಯೊಂದರಲ್ಲಿ ಓದುತ್ತಿದ್ದರಂರೆ. ಅಪ್ರಾಪ್ತೆ 7 ನೇ ತರಗತಿಯಲ್ಲಿದ್ದಾಗ ಈತ 8ನೇ ತರಗತಿ ಓದುತ್ತಿದ್ದ ಎಂದು ಹೇಳಲಾಗಿದೆ. ಅಪ್ರಾಪ್ತ 17 ವರ್ಷದವನಾಗಿದ್ದು, ಅಪ್ರಾಪ್ತೆಗೆ 16 ವರ್ಷ ವಯಸ್ಸಾಗಿದೆ. ಈ ಘಟನೆಯ ಆಧಾರದ ಮೇಲೆ ಅಪ್ರಾಪ್ತೆಯ ತಂದೆ ನೀಡಿದ ದೂರಿನ ಮೇರೆಗೆ ಅಪ್ರಾಪ್ತನ ವಿರುದ್ಧ ಎಫ್ಐಆರ್ ದಾಖಲು ಮಾಡಿಕೊಳ್ಳಲಾಗಿದೆ.