

ನವದೆಹಲಿ: ಹೆಣ್ಣು ಮಕ್ಕಳು ಗಂಡಿಗಿಂತ ಏನು ಕಮ್ಮಿ ಇಲ್ಲಾ ಎಂಬುದು ಹಲವು ಭಾರೀ ಸಾಬೀತಾಗಿದೆ. ಹೆಣ್ಣು ಮಕ್ಕಳ ಏಳಿಗೆಗಾಗಿ ಸರ್ಕಾರಗಳು ಹೊಸ ಹೊಸ ಕಾನೂನನ್ನು ಜಾರಿಗೆ ತರುತ್ತಿದ್ದು, ಅವರು ಶಿಕ್ಷಣದಲ್ಲಿ ಮುಂದೆ ಬರಲಿ ಎಂಬ ಕಾರಣಕ್ಕೆ ವಿದ್ಯಾರ್ಥಿವೇತನ ಸೇರಿದಂತೆ ಅನೇಕ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿದೆ. ಆದರೆ, ಇಲ್ಲೊಬ್ಬ ಯುಟ್ಯೂಬರ್ ಹೆಣ್ಣು ಮಕ್ಕಳ ಶಿಕ್ಷಣವನ್ನು ಉದ್ಧೇಶಿಸಿ ಹಾಡೊಂದನ್ನು ಮಾಡಿದ್ದು, ಇದು ಸಾಕಷ್ಟಯು ವಿವಾದಕ್ಕೆ ಕಾರಣವಾಗಿದೆ. ಈತನ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಪಾಕಿಸ್ತಾನ ಮೂಲದ ಯುಟ್ಯೂಬರ್ ಹಸನ್ ಇಕ್ಬಾಲ್ ಚಿಶ್ತಿ ಹೆಣ್ಣು ಮಕ್ಕಳ ಶಿಕ್ಷಣದ ಕುರಿತು ಅಶ್ಲೀಲವಾಗಿ ಸಾಹಿತ್ಯ ಬರೆದು ಹಾಡೊಂದನ್ನು ಹಾಡಿದ್ದು, ಶಾಲೆಯಿಂದ ಹೆಣ್ಣುಮಕ್ಕಳನ್ನು ಬಹಿಷ್ಕರಿಸುವಂತೆ ಹಾಡಿನಲ್ಲಿ ನೀಡಿದ್ದಾನೆ. ಇದಲ್ಲದೆ ಶಾಲೆಗೆ ಹೋಗುವ ಹೆಣ್ಣು ಮಕ್ಕಳು ಮುಂದಿನ ದಿನಗಳಲ್ಲಿ ವೇಶ್ಯೆಯರಾಗುತ್ತಾರೆ ಎಂದು ಹೇಳುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದಾನೆ.
ವೈರಲ್ ಆಗಿರುವ ಸಾಲುಗಳನ್ನು ನೋಡುವುದಾದರೆ, ಘರ್ ಪರ್ಡೆ ವಿಚ್ ಬಿಟಾಲೆ, ನಹೀ ತೆ ಯೇ ತೆ ಗಾಲ್ ಜೆಹೆನ್ ಚಿಪಾಲೆ ಒಥೇ ಡ್ಯಾನ್ಸ್ ಕರಡಿ ಪಯೀ ಏ. ಎಂಡಿ ಇಜ್ಜತ್ ಗವಾನಿ ಚಾಹ್ನೆ, ಜೆ ಕಂಜೀರಿ ಬನಾನೇ ಚಾಹ್ನೆ ಫಿರ್ ಧಿ ಸ್ಕೂಲ್ ಪಾದಾ ಲೆ ಎಂದಿದೆ. ಅದರರ್ಥ ಆಕೆಯನ್ನು ಮನೆಯಲ್ಲಿ ಇರಿಸಿ. ಆಕೆಯನ್ನು ಮುಚ್ಚಿಡಿ ಇಲ್ಲವಾದಲಿ ಆಕೆ ನೃತ್ಯ ಮಾಡುವುದನ್ನು ನೋಡಬೇಕಾಗುತ್ತದೆ. ನೀವು ಗೌರವವನ್ನು ಕಳೆದುಕೊಂಡು ಆಕೆಯನ್ನು ವೇಶ್ಯೆಯನ್ನಾಗಿ ಮಾಡಲು ಬಯಸಿದರೆ ಶಾಲೆಗೆ ಕಳುಹಿಸಿ. ಶಾಲೆಗೆ ಹೋಗುವ ಹೆಣ್ಣು ಮಕ್ಕಳು ತಮ್ಮ ಪವಿತ್ರತೆ ಮತ್ತು ಗೌರವವನ್ನು ಕಳೆದುಕೊಳ್ಳುತ್ತಾರೆ ಎಂದು ಶಿಕ್ಷಣವನ್ನು ಖಂಡಿಸಿ ಹಾಡು ಹಾಡಿದ್ದಾನೆ. ಈ
ಹಸನ್ ಇಕ್ಬಾಲ್ ಚಿಶ್ತಿ ಹಾಡಿರುವ ಹಾಡು ತಾಲಿಬಾನ್ ಸಿದ್ಧಾಂತವನ್ನು ಪ್ರತಿಧ್ವನಿಸಿದ್ದು, ಹೆಣ್ಣುಮಕ್ಕಳನ್ನು ನಾಲ್ಕು ಗೋಡೆಗಳಿಗೆ ಸೀಮಿತಗೊಳಿಸುವ ಬಗ್ಗೆ ಹೇಳಿರುವುದು ಸಾಕಷ್ಟು ಖಂಡನೆ ವ್ಯಕ್ತವಾಗುತ್ತಿದೆ. ಮುಂದಿನ ದಿನಗಳಲ್ಲಿ ಅಲ್ಲಿನ ಸರ್ಕಾರ ಈತನ ವಿರುದ್ಧ ಅದ್ಯಾವ ರೀತಿ ಕ್ರಮ ಕೈಗೊಳ್ಳುತ್ತೆ ಎಂದು ಕಾದು ನೋಡಬೇಕಿದೆ.