'ಹುಡುಗ ಕಪ್ಪು ಬೇಡ' ಎಂದವಳು..'ಮದುವೆಗೆ ರೆಡಿ' ಎಂದಳು! ಕಾರಣ ಕೇಳಿದ್ರೆ ಹೌಹಾರ್ತೀರಾ?

girl
Published on

ಮುಂಬೈ: ಹುಡುಗಿಯರು ಮದುವೆಗೆ ಒಪ್ಪುತ್ತಿಲ್ಲ. ಹುಡುಗರು 40-50ವರ್ಷವಾದರೂ ಇಂದಲ್ಲ, ನಾಳೆ ಕಂಕಣಭಾಗ್ಯ ಕೂಡಿಬರುತ್ತದೆ ಎಂದು ಕಾದುಕುಳಿತಿದ್ದಾರೆ. ಪಾಲಕರಿಗೆ ದಿಕ್ಕುತೋಚದ ಸ್ಥಿತಿ...ಇದು ನಮ್ಮ ಸಮಾಜದ ಇಂದಿನ ಪರಿಸ್ಥಿತಿ.

ಮದುವೆಗಳಿಗೆ ಸಂಬಂಧಿಸಿದ ಸುದ್ದಿ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತವೆ. ಇತ್ತೀಚೆಗಷ್ಟೇ ಯುವತಿಯೊಬ್ಬಳ ವಿಡಿಯೋವೊಂದು ಸದ್ದು ಮಾಡುತ್ತಿದೆ. ಫೋಟೋ ನೋಡಿದ ಆಕೆ ಹುಡುಗ ಕಪ್ಪಾಗಿದ್ದಕ್ಕೆ ಹುಡುಗನನ್ನು ತಿರಸ್ಕರಿಸಿದ್ದಾಳೆ. ಕೊನೆಗೆ ಅವನ ಕೆಲಸ ನೋಡಿ ಓಕೆ ಎಂದಿದ್ದಾಳೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಯುವತಿಯನ್ನು ಆಕೆಯ ಕುಟುಂಬದ ಸದಸ್ಯರು ವಿವಾಹವಾಗಲು ಒತ್ತಾಯಿಸಿ ಆಕೆಯ ಕೈಗೆ ಯುವಕನ ಫೋಟೋ ನೀಡಿದ್ದಾರೆ. ಅದನ್ನು ನೋಡಿದ ಯುವತಿ ಆತ ಕಪ್ಪಾಗಿರುವುದು ನನಗೆ ಇಷ್ಟವಾಗಲಿಲ್ಲ ಎಂದಿದ್ದಾಳೆ. ಈ ಮಾತುಗಳನ್ನು ಕೇಳಿದ ಕುಟುಂಬಸ್ಥರು ‘ಹುಡುಗ ಸರ್ಕಾರಿ ಕೆಲಸ ಮಾಡುತ್ತಿದ್ದಾನೆ’ ಎನ್ನುತ್ತಾರೆ.

ಆಗ ಅಲ್ಲಿಯವರೆಗೂ ಡಲ್ ಆಗಿದ್ದವಳು ಒಮ್ಮಲೇ ಇದ್ದಕ್ಕಿದ್ದಂತೆ ನಗುತ್ತಾಳೆ. "ನಿಶ್ಚಿತಾರ್ಥದ ದಿನಾಂಕ ಯಾವಾಗ?" ಎಂದು ನಗುತ್ತಾ ಕುಟುಂಬ ಸದಸ್ಯರನ್ನು ಕೇಳುತ್ತಾಳೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದಕ್ಕೆ ನೆಟಿಜನ್‌ಗಳು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. "ಸರ್ಕಾರಿ ಉದ್ಯೋಗದ ಶಕ್ತಿ ಎಂದರೆ ಇದೇ". ಈ ವಿಡಿಯೋ ಸದ್ಯ 8 ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಹೊಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net