ಬಾಲ್ಯದಿಂದಲೂ ಸ್ನೇಹಿತನಾಗಿದ್ದ ಟ್ರಾನ್ಸ್​​ಜೆಂಡರ್​ನನ್ನು ಮದುವೆಯಾದ ಯುವತಿ| Transgender

Transgender Marraige
Published on

Transgender: ಬಾಲ್ಯದ ಶಾಲಾ ದಿನಗಳಿಂದಲೂ ಸ್ನೇಹಿತನಾಗಿದ್ದ ಟ್ರಾನ್ಸ್​ಜೆಂಡರ್ ಯುವಕನನ್ನು ಯುವತಿಯೊಬ್ಬಳು ಪ್ರೀತಿಸಿ ಮದುವೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ಸೇಲಂ ಜಿಲ್ಲೆಯ ಅರಸಿಪಾಳ್ಯಂನಲ್ಲಿ ನಡೆದಿದೆ ಎಂದು ಬುಧವಾರ(ಆಗಸ್ಟ್​ 13) ವರದಿಯಾಗಿದೆ.

ಅರಸಿಪಾಳ್ಯಂನ ದುರೈರಾಜ್ ಎಂಬುವರ ಪುತ್ರಿ ಏಲಕ್ಕಿಯಾ ಶ್ರೀ (21), ಚೆಲ್ಲಾಟಂಪಟ್ಟಿಯ ಶೇಖರ್ ಎಂಬುವರ ಪುತ್ರ ಟ್ರಾನ್ಸ್​ಜೆಂಡರ್ ಶೇಖರ್ ಇಬ್ಬರು ಪ್ರೀತಿಸಿ ಮದುವೆಯಾಗಿದ್ದಾರೆ. ಶಾಲಾ ದಿನಗಳಿಂದಲೂ ಸ್ನೇಹಿತರಾಗಿದ್ದು, ಪದವಿ ಓದುವಾಗ ಇಬ್ಬರ ನಡುವೆ ಪ್ರೀತಿಗೆ ತಿರುಗಿತ್ತು ಎನ್ನಲಾಗಿದೆ.

ಪ್ರೀತಿ ಬಗ್ಗೆ ಇಬ್ದರು ತಮ್ಮ ತಮ್ಮ ಕುಟುಂಬಗಳಿಗೆ ತಿಳಿಸಿದಾಗ, ಆರಂಭದಲ್ಲಿ ವಿರೋಧಿಸಿದ್ದರು ಎನ್ನಲಾಗಿದೆ. ಸೋಮವಾರ ಈರೋಡ್​ನ ಗೋಪಿಸೆಟ್ಟಿಪಾಳ್ಯಂನಲ್ಲಿರುವ ಮಂಟಪದಲ್ಲಿ ಮದುವೆಯಾಗಿದ್ದು, ಅನೇಕರು ಹೊಸ ಜೋಡಿ ಅಭಿನಂದಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net