10 ತಿಂಗಳಲ್ಲಿ 38 ಕೆಜಿ ತೂಕ ಇಳಿಸಿಕೊಂಡ ಯುವತಿ: Weight Loss ವೇಳೆ ಈ ಸಾಮಾನ್ಯ ತಪ್ಪು ಮಾಡ್ಬಾರದಂತೆ!

dk - 2025-02-25T135730.580
Published on

Weight Loss:ಸಾಮಾನ್ಯವಾಗಿ ಜನರು ತೂಕ ಅಧಿಕ ಮತ್ತು ಕಡಿಮೆ ಮಾಡಿಕೊಳ್ಳಲು ದಿನವಿಡೀ ಸಾಕಷ್ಟು ಪ್ರಯತ್ನದ ಜತೆ ಸಾಹಸವನ್ನು ಮಾಡುತ್ತಲೇ ಇರುತ್ತಾರೆ. ಆದರೆ, ಎಷ್ಟೇ ಪ್ರಯತ್ನಪಟ್ಟರೂ ಕೆಲ ತಪ್ಪಿನಿಂದಾಗಿ ನಮ್ಮಿಂದ ಇದು ಸಾಧ್ಯವಿಲ್ಲ ಎಂದು ಪ್ರಯತ್ನದಿಂದ ದೂರ ಸರಿಯತ್ತಾರೆ. ಆದರೆ, ಇಲ್ಲೊಬ್ಬರ ಆನಾರೋಗ್ಯ ಮಹಿಳೆ 10 ತಿಂಗಳಲ್ಲಿ 38 ಕೆ.ಜಿ ತೂಕ ಇಳಿಸಿಕೊಳ್ಳುವ ಮೂಲಕ ಪ್ರೇರಣೆಯಾಗಿದ್ದಾರೆ.

ಹೌದು, ಸುಜಾತ ಎಂಬ ಮಹಿಳೆ ತಮ್ಮ ತೂಕ ಇಳಿಸಿಕೊಂಡಿರುವುದರ ಬಗ್ಗೆ ಇತ್ತೀಚಿನ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದಾರೆ. ತಮಗೆ ಪಾಲಿಸಿಸ್ಟಿಕ್​ ಓವರಿ ಸಿಂಡ್ರೋಮ್​(PCOS) ಇದ್ದರೂ ಪ್ರಯತ್ನದಿಂದ ತೂಕ ಇಳಿಸಿಕೊಂಡಿದ್ದಾಳೆ. ಅಲ್ಲದೆ, ತೂಕ ಇಳಿಸಿಕೊಳ್ಳುವಾಗ ಕೆಲ ಸಾಮಾನ್ಯ ತಪ್ಪುಗಳಿಂದ ನಮ್ಮ ಪ್ರಯತ್ನ ವಿಫಲವಾಗಲಿದೆ. ಹೀಗಾಗಿ, ಈ ಸಂರ್ಭದಲ್ಲಿ ಏನು ಮಾಡಬೇಕು? ಮತ್ತು ಏನು ತಪ್ಪುಗಳು ಮಾಡಬಾರದು ಎಂದು ಹೇಳಿಕೊಂಡಿದ್ದಾರೆ. ಇದೀಗ ಈ ವಿಡಿಯೋ ವೈರಲ್​ ಆಗುತ್ತಿದ್ದು, ನೆಟ್ಟಿಗರ​ ಮನ ಗೆದ್ದಿದೆ. ​

ತೂಕ ಇಳಿಕೆ ಸಂದರ್ಭದಲ್ಲಿ ಸಾಮಾನ್ಯ ತಪ್ಪುಗಳು

1.ತೂಕದ ಸಂಖ್ಯೆಯ ಮೇಲೆ ಗಮನಹರಿಸಬೇಡಿ

ತೂಕ ಇಳಿಸುವ ಪ್ರಯತ್ನಗಳು ಸಾಮಾನ್ಯವಾಗಿ ವಿಫಲಗೊಳ್ಳುತ್ತವೆ, ಜನರು ಕೇವಲ ತಮ್ಮ ತೂಕ ಇಳಿಸಿಕೊಳ್ಳುವ ಸಂಖ್ಯೆಯ ಮೇಲೆ ಮಾತ್ರ ಗಮನ ಹರಿಸುತ್ತಾರೆ. ಇದು ನೀರಿನ ಧಾರಣ, ಸ್ನಾಯುಗಳ ಹೆಚ್ಚಳ ಮತ್ತು ಹಾರ್ಮೋನ್​ಗಳ ಬದಲಾವಣೆಯಂತಹ ಅಂಶಗಳಿಂದ ದಾರಿ ತಪ್ಪಿಸುತ್ತದೆ. ಹೀಗಾಗಿ, ನಿಮ್ಮ ಪ್ರಗತಿಯ ಫೋಟೊಗಳು, ನಿಮ್ಮ ಆಳತೆ ಮತ್ತು ವೈಯಕ್ತಿಕ ಭಾವನೆಗಳು ಉತ್ತಮ ಸೂಚಕಗಳಾಗಿವೆ.

2.ಊಟ ಬಿಡಿವುದು

ತೂಕ ಇಳಿಸುವ ಭರದಲ್ಲಿ ಕೆಲವು ಬಾರಿ ಊಟವನ್ನೇ ಮಾಡುವುದಿಲ್ಲ. ಊಟ ಮಾಡದೇ ಇರುವುದು ತೂಕ ಇಳಿಸಿಕೊಳ್ಳಲು ಸೂಕ್ತ ವಿಧಾನವಲ್ಲ. ಅಲ್ಲದೆ, ನಿರಂತರ ಊಟ ಬಿಡುವುದರಿಂದ ನಮ್ಮ ದೇಹದ ಮೇಲೆ ಪ್ರತಿಕೂಲ ಪರಿಣಾಮ ಬಿರುತ್ತದೆ. ಇದರಿಂದ ಚಯಾಪಚ ಕ್ರಿಯೆ ನಿಧಾನಗೊಳ್ಳುತ್ತದೆ. ಹೀಗಾಗಿ, ಊಟ ಬಿಡುವ ಬದಲಾಗಿ ದೇಹಕ್ಕೆ ಎಷ್ಟು ಕ್ಯಾಲೋರಿ ಬೇಕೋ ಅಷ್ಟು ತಗೆದುಕೊಳ್ಳವುದು ಸೂಕ್ತ.

3.ಆಹಾರಕ್ರಮ ಸರಿ ಇಲ್ಲದಿರುವುದು

ಅನೇಕ ಜನರು ತೂಕ ಇಳಿಸಿಕೊಳ್ಳುವ ಭರವಸೆಯಲ್ಲಿ ಸಮರ್ಥಿನಿಯವಲ್ಲದ ಆಹಾರಗಳನ್ನು ತೆಗೆದುಕೊಳ್ಳುತ್ತಾರೆ. ಅಲ್ಲದೆ, ತಮಗೆ ಇಷ್ಟವಾದ ಆಹಾರವನ್ನು ಬಿಟ್ಟುಬಿಡುತ್ತಾರೆ. ಆದರೆ, ತೂಕ ಇಳಿಸಿಕೊಳ್ಳಲು ಸರಿಯಾದ ಆಹಾರ ಕ್ರಮ ಮತ್ತು ದೇಹ ಸದೃಢವಾಗಿರಲು ಸಾಕಷ್ಟು ಪ್ರೋಟಿನ್​ ಸೇವನೆ ಮುಖ್ಯ.

4.ಆರೋಗ್ಯಕಾರ ಆಹಾರ ಸೇವಿಸಿ

ಆರೋಗ್ಯಕರ ಕೊಬ್ಬನ್ನು(ಫ್ಯಾಟ್​) ಸೇವಿಸಿ ಆರೋಗ್ಯಕರ ಕೊಬ್ಬುಗಳು ಹಾರ್ಮೋನ್ ನಿಯಂತ್ರಣ ಮತ್ತು ಆರೋಗ್ಯದಲ್ಲಿ ಅತ್ಯಗತ್ಯ ಪಾತ್ರ ವಹಿಸುತ್ತವೆ. ಸಮತೋಲಿತ ಆಹಾರಕ್ಕಾಗಿ ಆವಕಾಡೊಗಳು(Butter Fruit),ನಟ್ಸ್​ ಮತ್ತು ಆಲಿವ್ ಎಣ್ಣೆಯಂತಹ ಆಹಾರಗಳನ್ನು ಸೇವಿಸುವುದು ಮುಖ್ಯವಾಗಿದೆ.

5.ಸಾಕಷ್ಟು ನಿದ್ರೆ ಮಾಡುತ್ತಿಲ್ಲ

ನಿದ್ರೆ ಕಡಿಮೆ ಆಗುವುದು ಮತ್ತು ಒತ್ತಡ ಹೆಚ್ಚಾದಾಗ ಕಾರ್ಟಿಸೋಲ್ ಹಾರ್ಮೋನುಗಳು ಹಾಳಾಗಿ ಹೊಟ್ಟೆಯಲ್ಲಿ ಕೊಬ್ಬು ಸಂಗ್ರಹವಾಗುತ್ತದೆ. ನಿದ್ರೆ ತೂಕ ಇಳಿಕೆಗೆ ಮತ್ತು ಏರಿಕೆಗೆ ಅತ್ಯಗತ್ಯ. ನಿದ್ದೆ ಚೆನ್ನಾಗಿ ಮಾಡಬೇಕು ಎಂದು ಸುಜಾತ ಹೇಳಿಕೊಂಡಿದ್ದಾರೆ.(ಏಜೆನ್ಸೀಸ್​)

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net