ತಾಳಿ ಕಟ್ಟಿದ 3 ದಿನಕ್ಕೆ ಗಂಡ ನಾಪತ್ತೆ! ಮದ್ವೆ ಫೋಟೋ ಸಾಕ್ಷಿಗೆ ಪತಿ ಕೊಟ್ಟ ಉತ್ತರ ಕೇಳಿ ಪತ್ನಿ ಶಾಕ್​

Marriage Cheating BNG
ಸಂತ್ರಸ್ತೆ ಧರಣಿ ಮತ್ತು ಆರೋಪಿ ಸುರೇಶ್​
Published on

ಬೆಂಗಳೂರು: ಮದುವೆಯಾದ ಮೂರೇ ದಿನಕ್ಕೆ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಬಿಟ್ಟು ಪರಾರಿಯಾಗಿದ್ದು, ಈ ಬಗ್ಗೆ ಪ್ರಶ್ನೆ ಮಾಡಿದರೆ ನಾನಾ ಕಾರಣಗಳನ್ನು ಹೇಳಿ ನುಣುಚಿಕೊಳ್ಳಲು ಪ್ರಯತ್ನಿಸುತ್ತಿರುವ ಪ್ರಸಂಗ ಬೆಳಕಿಗೆ ಬಂದಿದೆ.

ನಗರದ ಕೆ.ಆರ್.ಪುರಂನಲ್ಲಿ ಈ ಘಟನೆ ನಡೆದಿದೆ. ಸಂತ್ರಸ್ತೆ ಧರಣಿ ಮತ್ತು ಸುರೇಶ್​ ಕಳೆದ ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರಂತೆ. ಕಳೆದ ಫೆಬ್ರವರಿ 13ರಂದು ಸುರೇಶ್​ ಜೊತೆ ಮದುವೆ ಆಗಿದೆ ಎಂದು ಧರಣಿ ಹೇಳುತ್ತಿದ್ದಾರೆ. ನಾವಿಬ್ಬರು ಫೆ. 13 ರಿಂದ ಫೆ. 17 ರವರೆಗೂ ಒಟ್ಟಿಗೆ ಇದ್ದೆವು. 18 ರಂದು ತನ್ನ ಮನೆಗೆ ಕರೆದುಕೊಂಡು ಹೋಗ್ತೀನಿ ಎಂದವನು ನಾಪತ್ತೆಯಾಗಿದ್ದಾನೆ ಎಂದು ಧರಣಿ ಆರೋಪ ಮಾಡಿದ್ದಾಳೆ.

ಇದೀಗ ಹೊಸ ವರಸೆ ತೆಗೆದಿರುವ ಸುರೇಶ್​​, ನಾನು ವಿವಾಹವಾಗಲೇ ಇಲ್ಲ. ಆಕೆಯ ಜತೆ ಸ್ನೇಹಿತನಾಗಿ ಮಾತ್ರ ಇದ್ದೆ. ಅವಳ ಜತೆಗಿರುವ ಮದುವೆ ಫೋಟೋಗಳು ಕಿರುಚಿತ್ರದ ಫೋಟೋಗಳು ಎನ್ನುತ್ತಿದ್ದಾನಂತೆ.

ಅಂದಹಾಗೆ ಧರಣಿ 2016ರಲ್ಲೇ ಮೊದಲ ವಿವಾಹವಾಗಿದ್ದರಂತೆ. ನಂತರ ಪತಿ ಬಿಟ್ಟು ದೂರವಾಗಿದ್ದಳಂತೆ. ಈ ವಿಚಾರ ಸುರೇಶ್​​ಗೆ ಗೊತ್ತಿದ್ದರೂ ಮದುವೆ ಆಗಿದ್ದಾನೆ. ಈಗ ನೋಡಿದರೆ ನನ್ನನ್ನು ಬಿಟ್ಟುಹೋಗಿದ್ದಾನೆ ಎಂದು ಆರೋಪ ಮಾಡಿರುವ ಧರಣಿ, ಕೆ.ಆರ್.ಪುರಂ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net