

ಬೆಂಗಳೂರು: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ನಷ್ಟವಾಗಿದ್ದರಿಂದ ಮನನೊಂದು ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಕೆಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೃಷ್ಣ ಗಾರ್ಡನ್ ನಿವಾಸಿ ಅರ್ಪಿತ (೨೪) ಆತ್ಮಹತ್ಯೆ ಮಾಡಿಕೊಂಡ ಯುವತಿ.
ಮೂಲತಃ ಮಂಡ್ಯದ ಮದ್ದೂರು ತಾಲೂಕು ಕಾಡುಕೊತ್ತನಹಳ್ಳಿಯ ಅರ್ಪಿತಾ. ನಗರದ ಕೃಷ್ಣಗಾರ್ಡನ್ ಇರುವ ಅತ್ತೆ ಮಂಜುಳ (ತಂದೆಯ ಸಹೋದರಿ) ಮನೆಯಲ್ಲಿ ವಾಸವಾಗಿದ್ದರು. ಡೆಂಟಲ್ ಆಸ್ಪತ್ರೆವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಶಾಪಿಂಗ್ ಮಾಡುವ ಸಲುವಾಗಿ ಅರ್ಪಿತಾ ಅವರ ತಾಯಿ ಮತ್ತು ಸಹೋದರಿಯು ಕೂಡ ಭಾನುವಾರ ನಗರಕ್ಕೆ ಬಂದಿದ್ದರು. ಅರ್ಪಿತ ಅವರನ್ನು ಕರೆದಿದ್ದಾರೆ. ಆದರೆ ನನಗೆ ಹುಷಾರಿಲ್ಲ. ಮನೆಯಲ್ಲೆ ಇರುತ್ತೆನೆಂದು ಅರ್ಪಿತ ಹೇಳಿ ಕಳುಹಿಸಿದ್ದಾರೆ. ಬಳಿಕ ಮನೆಯಲ್ಲಿ ಯಾರು ಇಲ್ಲದಿದ್ದಾಗ ಸಂಜೆ ೬ ಗಂಟೆಗೆ ಕೋಣೆಯಲ್ಲಿ ಕಬ್ಬಿಣದ ಕೊಂಡಿಗೆ ವೇಲ್‌ನಿಂದ ನೇಣುಬಿಗಿದುಕೊಂಡು ಆತಹತ್ಯೆಗೆ ಶರಣಾಗಿದ್ದಾರೆ. ಕುಟುಂಬ ಸದಸ್ಯರು ಮನೆಗೆ ವಾಪಸ್ ಬಂದಾಗ ಘಟನೆ ಬೆಳಕಿಗೆ ಬಂದಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೆಂಗೇರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.