ಜಾರಕಿಹೊಳಿ ವಿರುದ್ಧ ದೂರು ಕೊಟ್ಟ ಯುವತಿ: ಆಕೆ ಬರೆದ ದೂರಿನ ಪ್ರತಿ ಇಲ್ಲಿದೆ ನೋಡಿ

cd case lady letter
Published on

ಬೆಂಗಳೂರು: ರಮೇಶ್​ ಜಾರಕಿಹೊಳಿ ಸಿಡಿ ಕೇಸ್​ನ ಯುವತಿ ಪರವಾಗಿ ವಕೀಲ ಜಗದೀಶ್​ ಕೆ.ಎನ್.​ ಮಹದೇವ್ ನೇತೃತ್ವದ ತಂಡ ಪೊಲೀಸ್​​ ಕಮಿಷನರ್ ಕಚೇರಿಗೆ ಶುಕ್ರವಾರ ಮಧ್ಯಾಹ್ನ ದೂರು ನೀಡಿದೆ.

ಶುಕ್ರವಾರ ಬೆಳಗ್ಗೆ 3ನೇ ವಿಡಿಯೋ ರಿಲೀಸ್​ ಮಾಡಿದ್ದ ‘ಸಂತ್ರಸ್ತ’ ಯುವತಿ, ರಾಜ್ಯದ ಜನತೆ, ಎಲ್ಲ ಸಂಘಟನೆಗಳು, ರಾಜಕೀಯ ಪಕ್ಷದವರು ಬೆಂಬಲ ವ್ಯಕ್ತಪಡಿಸುತ್ತಿರುವುದರಿಂದ ಇಷ್ಟು ದಿನ ಕಾಡುತ್ತಿದ್ದ‌ ಜೀವ ಭಯ ನನ್ನನ್ನು ದೂರವಾಗಿದೆ. ನನ್ನಪರ ವಕೀಲರಾದ ಜಗದೀಶ್ ಮೂಲಕ ರಮೇಶ್ ಜಾರಕಿಹೊಳಿ ವಿರುದ್ಧ ದೂರು ಸಲ್ಲಿವೆ ಎಂದಿದ್ದಳು. ಅದರಂತೆ ವಕೀಲ ಜಗದೀಶ್ ನೇತೃತ್ವದಲ್ಲಿ 6 ಜನರ ವಕೀಲರ ತಂಡ ಕಮಿಷನರ್​ ಕಚೇರಿಗೆ ಆಗಮಿಸಿ ದೂರು ನೀಡಿದೆ. ಆ ದೂರಿನ ಪ್ರತಿ ವಿಜಯವಾಣಿಗೆ ಲಭ್ಯವಾಗಿದೆ.

ನಮ್ಮನ್ನು ನಂಬಿ ಯುವತಿ ಲಿಖಿತ ದೂರು ಕಳುಹಿಸಿದ್ದಾಳೆ. ಅದನ್ನು ಬೆಂಗಳೂರು ಪೊಲೀಸ್​ ಆಯುಕ್ತರಿಗೆ ತಲುಪಿಸಿದ್ದೇವೆ. ಆಕೆ ಸದ್ಯ ಪ್ರಾಣ ಭೀತಿಯಲ್ಲಿರುವುದರಿಂದ ಪತ್ರ ಹೇಗೆ ಕಳುಹಿಸಿದಳು ಎಂಬ ಮೂಲವನ್ನು ಹೇಳಲು ಸಾಧ್ಯವಿಲ್ಲ. ಯುವತಿಗೆ ತಾನು ಸೇಫ್​ ಅನಿಸಿದರೆ ಆಕೆಯೇ ಮುಂದೆ ಬಂದು ಸ್ವತಃ ಹೇಳಿಕೆ ನೀಡಲು ಸಿದ್ಧವಾಗಿದ್ದಾಳೆ ಎಂದು ವಕೀಲ ಜಗದೀಶ್​ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net