ಯುವತಿ ಎ.13ರಂದು ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ಖಾತೆಯನ್ನು ವೀಕ್ಷಿಸುತ್ತಿದ್ದಾಗ ಅದರಲ್ಲಿ ರಿಕ್ರೂಟಿಂಗ್ ಏಜೆನ್ಸಿ ಎಂಬ ಹೆಸರಿನಿಂದ ಉದ್ಯೋಗ ನೇಮಕಾತಿಯ ಕುರಿತು ಪೋಸ್ಟ್ ಬಂದಿತ್ತು. ಕ್ರೂಸರ್ ನಲ್ಲಿ ಉದ್ಯೋಗವಿರುವ ಬಗ್ಗೆ ತಿಳಿಸಲಾಗಿತ್ತು. ಯುವತಿ ಪೋಸ್ಟ್ ನಲ್ಲಿದ್ದ ನಂಬರ್ ಗೆ ಕರೆ ಮಾಡಿ ವಿಚಾರಿಸಿದಾಗ ಅಪರಿಚಿತ ವ್ಯಕ್ತಿ ಆತನ ಹೆಸರು ಯುಎಸ್‌ಎಯ ಜಾನ್ ಫೆವಿಲಿನ್ ಎಂಬುದಾಗಿಯೂ, ಯುಎಸ್ ಎಯ ಪ್ರಿನ್ಸೆಸ್ ಕ್ರೂಸ್ ಲೈನ್ಸ್ ಲಿ.ನ ಮ್ಯಾನೇಜರ್ ಆಗಿರುವುದಾಗಿಯೂ ತಿಳಿಸಿದ್ದನು. ನೋಂದಾವಣೆಗೆ 10,000 ರೂ. ಪಾವತಿ ಮಾಡುವಂತೆ ತಿಳಿಸಿದ್ದನು. ಬಳಿಕ ವರ್ಕ್ ಪರ್ಮಿಟ್ ಗೆಂದು 42,000 ರೂ. ಕೇಳಿದ್ದ. ಅದನ್ನು ಯುವತಿ ಗೂಗಲ್ ಪೇ ಮೂಲಕ ಪಾವತಿಸಿದ್ದರು. ಆ ಬಳಿಕ ವೀಸಾ ಪ್ರೊಸೆಸಿಂಗ್ ಹಾಗೂ ಇನ್ನಿತರ ಕಾರಣಗಳನ್ನು ನೀಡಿ ಹಂತ ಹಂತವಾಗಿ ಒಟ್ಟು 4.12 ಲಕ್ಷ ರೂ.ಗಳನ್ನು ಪಡೆದುಕೊಂಡು ಮೋಸ ಮಾಡಿದ್ದಾನೆ. ಯುವತಿ ನೀಡಿರುವ ದೂರಿನಂತೆ ಪ್ರಕರಣ ದಾಖಲಾಗಿದೆ.