ಯುವಕನ ಸ್ಟೇಟಸ್​ ನೋಡಿ ಮನೆಗೆ ಬಂದವರಿಗೆ ಕಾದಿತ್ತು ಶಾಕ್​! ಮೊಬೈಲ್​ನಲ್ಲಿದಿಯಾ ಆ ರಹಸ್ಯ?

sucide
Published on

ಉದಯಪುರ: ಈಗಿನ ಯುವ ಸಮಾಜ ಸಂಪೂರ್ಣವಾಗಿ ಸಾಮಾಜಿಕ ಜಾಲತಾಣಗಳ ಮೇಲೆ ಅವಲಂಬಿತವಾಗಿಬಿಟ್ಟಿದೆ. ಕುಟುಂಬದ ಜತೆ ಊಟಕ್ಕೆ ಹೋಗುವುದರಿಂದ ಹಿಡಿದು, ಸ್ನೇಹಿತರ ಜತೆ ಕಾಫಿ ಕುಡಿಯುವುದರ ಬಗ್ಗೆಯೂ ಸ್ಟೇಟಸ್​ ಹಾಕಿಕೊಂಡೇ ಬದುಕುತ್ತಿದೆ. ಅದೇ ರೀತಿ ಯುವಕನೊಬ್ಬ ಹಾಕಿದ್ದ ಸ್ಟೇಟಸ್​ ಕಂಡು ಗಾಬರಿಯಿಂದ ಆತನ ಮನೆಗೆ ಬಂದ ಸಂಬಂಧಿಕರಿಗೆ ದೊಡ್ಡದೊಂದು ಶಾಕ್​ ಆಗಿದೆ.

ರಾಜಸ್ಥಾನದ ಉದಯಪುರದಲ್ಲಿ ಮಹೇಂದ್ರ ಸಿಂಗ್​ (19) ದಿನಸಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ವಿದ್ಯಾಭ್ಯಾಸ ಮುಗಿಸಿದ ನಂತರ ತಂದೆ ತಾಯಿಯನ್ನು ಊರಿನಲ್ಲಿ ಬಿಟ್ಟು, ದುಡಿಮೆಗಾಗಿ ಆತ ಉದಯಪುರಕ್ಕೆ ಬಂದಿದ್ದ. ಅಲ್ಲೇ ಒಂದು ಬಾಡಿಗೆ ರೂಂ ಮಾಡಿಕೊಂಡು ಬದುಕುತ್ತಿದ್ದ.

ಸೋಮವಾರ ಬೆಳಗ್ಗೆ ಆತ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಸ್ಟೇಟಸ್​ ಹಾಕಿದ್ದಾನೆ. ಗುಡ್​ ಬೈ ಎಂದು ಸ್ಟೇಟಸ್​ ಹಾಕಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಯುವಕ ಹಾಕಿದ್ದ ಸ್ಟೇಟಸ್​ ನೋಡಿ ಆತನ ಸಂಬಂಧಿಕರು ಗಾಬರಿಯಾಗಿದ್ದಾರೆ. ಉದಯಪುರದಲ್ಲಿದ್ದ ಕೆಲ ಸಂಬಂಧಿಕರು ನೇರವಾಗಿ ಆತನ ಬಾಡಿಗೆ ಮನೆಗೆ ಧಾವಿಸಿದ್ದಾರೆ. ಆದರೆ ಅವರು ಬರುವಷ್ಟರಲ್ಲಿ ಯುವಕ ನೇಣಿನಲ್ಲಿ ಶವವಾಗಿ ನೇತಾಡುತ್ತಿದ್ದ. ಈ ವಿಚಾರವನ್ನು ಪೊಲೀಸರಿಗೆ ತಿಳಿಸಲಾಗಿದ್ದು, ಸ್ಥಳಕ್ಕೆ ಬಂದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಊರಲ್ಲಿದ್ದ ತಂದೆ ತಾಯಿಗೆ ವಿಚಾರ ಮುಟ್ಟಿಸಲಾಗಿದೆ. ಯುವಕನ ಫೋನನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ಆ ಫೋನಿನಿಂದ ಸಿಗಬಹುದು ಎನ್ನುವ ನಿರೀಕ್ಷೆಗಳಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net