ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆ KISS ಕೊಟ್ಟ ಯುವಕ; ವಿಡಿಯೋ ವೈರಲ್: ಆರೋಪಿ ಬಂಧನ

dk - 2025-05-28T194508.484
Published on

KISS: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮುಸ್ಲಿಂ ಮಹಿಳೆಗೆ ಬೈಕ್​ನಲ್ಲಿ ಬಂದ ಯುವಕ ಏಕಾಏಕಿ ಆಕೆಗೆ ಕಿಸ್​(ಮುತ್ತು) ಕೊಟ್ಟ ಘಟನೆ ಉತ್ತರಪ್ರದೇಶದ ಮೀರತ್​ ಬೀದಿಯಲ್ಲಿ ನಡೆದಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೀರತ್​​ ಪೊಲೀಸರು ಆರೋಪಿ 25 ವರ್ಷದ ಮೊಹಮ್ಮದ್ ಸುಹೇಲ್ ಅನ್ನು ಬಂಧಿಸಿದ್ದಾರೆ. ಮುತ್ತಿಟ್ಟ ವಿಚಾರಕ್ಕೆ ಸುಹೇಲ್ ಅನ್ನು ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗಿದೆ. ಆರೋಪಿ​ ಆಕೆಯ ಹತ್ತಿರ ಕ್ಷಮೆ ಕೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಡಿಯೋ ಇಲ್ಲಿದೆ ನೋಡಿ...

ಪ್ರಕರಣ ಏನು..?

ಮೇ.20ರಂದು ಮೀರತ್​ನ ಲಿಸಾರಿ ಗೇಟ್​ ಪ್ರದೇಶದಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಒಬ್ಬಂಟಿಯಾಗಿ ನಡೆದುಕೊಂಡು ಬರುವಾಗ ಈ ಘಟನೆ ನಡೆದಿದೆ.

ಮಹಿಳೆಯೊಬ್ಬರು ಕಿರಿದಾದ ಲೇನ್‌ನಲ್ಲಿ ನಡೆದುಕೊಂಡು ಹೋಗುತ್ತಿರುವುದು ವಿಡಿಯೋದಲ್ಲಿ ಕಾಣುತ್ತಿದೆ. ಆಗ ಇದ್ದಕ್ಕಿದ್ದಂತೆ ಬೈಕ್‌ನಲ್ಲಿ ಬಂದ ಯುವಕನೊಬ್ಬ ಬಂದು ಆಕೆಗೆ ಮುತ್ತಿಕ್ಕಿದ್ದಾಳೆ. ಮಹಿಳೆ ಆರೋಪಿಯ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಳೆ. ಆದರೆ, ಆರೋಪಿ ಸ್ಥಳದಿಂದ ಪರಾರಿಯಾಗಿತ್ತಿರುವುದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net