ಬಾವರ್ಚಿ Biryani ತಿಂದು ಯುವಕ ಅಸ್ವಸ್ಥ.. ಆಸ್ಪತ್ರೆಗೆ ದಾಖಲು

Biryani_
Published on

ಹೈದರಾಬಾದ್​: ಭಾರತದ ಬಿರಿಯಾನಿಗಳಲ್ಲಿ ಹೈದರಬಾದ್​ನ ಬಾವರ್ಚಿ ಬಿರಿಯಾನಿ(Biryani) ಫೇಮಸ್​​. ಆದರೆ, ಇದೇ ಬಿರಿಯಾನಿ ತಿಂದು ಯುವಕನೊಬ್ಬ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ ಪ್ರಕರಣದ ಬೆಳಕಿಗೆ ಬಂದಿದೆ.

ರವಿ ಎನ್ನುವ ಯುವಕ ದಾಖಲಾಗಿದ್ದು, ಇಲ್ಲಿನ ನೇರಡ್​ಮೇನ್​ನ ಗ್ರೀನ್​ ಬಾವರ್ಚಿ ಹೋಟೆಲ್​ನಲ್ಲಿ ಗುರುವಾರ ತಡರಾತ್ರಿ ಬಿರಿಯಾನಿ ಸೇವಿಸಿದ್ದಾನೆ. ಮನೆಗೆ ಬಂದ ಬಳಿಕ ವಾಂತಿ, ಬೇಧಿ, ಹೊಟ್ಟೆ ನೋವು ಆರಂಭವಾಗಿದೆ. ಈ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದಾನೆ. ಇನ್ನು ಹೋಟೆಲ್​ನಲ್ಲಿ ಹಳಸಿದ ಬಿರಿಯಾನಿ ನೀಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಯುವಕನ ತೊಂದರೆ ಗಮನಿಸಿದ ಕೆಲವರು, ವೈದ್ಯರು ನೀಡಿರುವ ಪ್ರಿಸ್ಕ್ರಿಷನ್​ ಮತ್ತು ಆಸ್ಪತ್ರೆಗೆ ದಾಖಲಾದ ಪೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್​ ಮಾಡಿದ್ದಾರೆ.

''ನ.14ರಂದು ನೇರಡ್​ಮೇನ್​ನ ಗ್ರೀನ್​ ಬಾವರ್ಚಿ ಹೊಟೇಲ್​ನಲ್ಲಿ ಬಿರಿಯಾನಿ ಸೇವಿಸಿ ಯುವಕ ಆಸ್ವಸ್ಥಗೊಂಡಿದ್ದಾನೆ. ಹೀಗಾಗಿ, ಹೋಟೆಲ್​​ ವಿರುದ್ಧ ಕ್ರಮಕೈಗೊಳ್ಳುವುದರ ಜತೆಗೆ ಇಂತಹ ಪ್ರಕರಣಗಳು ದಿನೆದಿನೇ ಹೆಚ್ಚುತ್ತಿದ್ದು, ಹೈದರಾಬಾದ್​​ ನಗರದ್ಯಾಂತ ಹೋಟೆಲ್​​ಗಳ ಆಹಾರ ತಪಾಸಣೆ ಆಗತ್ಯ ಇದೆ. ಹೀಗಾಗಿ, ಆಹಾರ ಸುರಕ್ಷತೆ ಆಯುಕ್ತರು ಮತ್ತು ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪೋಸ್ಟ್​ನಲ್ಲಿ ಒತ್ತಾಯಿಸಿದ್ದಾರೆ,(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net