19ರ ಯುವಕ ಡ್ಯಾನ್ಸ್​ ಮಾಡುತ್ತಲೇ ಕುಸಿದು ಬಿದ್ದು ಸಾವು; ಸಂಭ್ರಮದ ಸಂದರ್ಭದಲ್ಲೇ ಶೋಕ

Heart Attack
Published on

ತೆಲಂಗಾಣ: ದೇಶ ಹಾಗೂ ರಾಜ್ಯಗಳಲ್ಲಿ ಕುಸಿದು ಬಿದ್ದು ಸಾವಿಗೀಡಾಗುತ್ತಿರುವ ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಿದ್ದರೂ ಅದರ ಬಗ್ಗೆ ಜನಪ್ರತಿನಿಧಿಗಳು ಮೌನ ತಾಳಿದ್ದಾರೆ. ಮತ್ತೊಂದೆಡೆ ಇಂಥ ಪ್ರಕರಣಗಳು ಮುಂದುವರಿದಿದ್ದು, ಇದೀಗ ಯುವಕನೊಬ್ಬ ಡ್ಯಾನ್ಸ್ ಮಾಡುತ್ತಲೇ ಕುಸಿದು ಬಿದ್ದು ಸಾವಿಗೀಡಾದ ವಿಡಿಯೋ ಹರಿದಾಡಲಾರಂಭಿಸಿದೆ.

ಮಹಾರಾಷ್ಟ್ರ ಮೂಲದ ಮುತ್ಯಂ (19) ಸಾವಿಗೀಡಾದ ಯುವಕ. ಹೈದರಾಬಾದ್​ನ ನಿರ್ಮಲ್ ಜಿಲ್ಲೆಯ ಪರ್ಡಿ ಗ್ರಾಮದಲ್ಲಿ ಈ ಪ್ರಕರಣ ನಡೆದಿದೆ. ಈತ ಮದುವೆಯ ಸಮಾರಂಭದ ಸಂಭ್ರಮವೊಂದರಲ್ಲಿ ಡ್ಯಾನ್ಸ್ ಮಾಡುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಕುಣಿಯುತ್ತಲೇ ಈತ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾನೆ.

ಈತನನ್ನು ಕೂಡಲೇ ಭೈನ್ಸಾ ಪ್ರದೇಶದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಮಾರ್ಗಮಧ್ಯೆಯೇ ಸಾವು ಸಂಭವಿಸಿದ್ದಾಗಿ ವೈದ್ಯರು ಖಚಿತ ಪಡಿಸಿದ್ದಾರೆ. ಯುವಕ ಹಠಾತ್ ಹೃದಯಾಘಾತಕ್ಕೆ ಒಳಗಾಗಿದ್ದ ಎಂದು ವೈದ್ಯರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net