ಹೆಣ್ಣು ನೀಡುತ್ತಿಲ್ಲವೆಂದು ಯುವಕ ಆತ್ಮಹತ್ಯೆ

8-67f95e9375b0c
Published on

ಹರಪನಹಳ್ಳಿ (ವಿಜಯನಗರ): ಮದುವೆಯಾಗಲು ಯಾರೂ ಹೆಣ್ಣು ನೀಡುತ್ತಿಲ್ಲವೆಂದು ಮನನೊಂದ ಮಾಡ್ಲಗೇರಿ ಗ್ರಾಮದ ಇಮಾಮ್ ಸಾಬ್ (35) ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈತ ಪೋಲಿಯೋ ಪೀಡಿತನಾಗಿದ್ದು, ಎಡಗಾಲಿನ ವೈಕಲ್ಯ ಹೊಂದಿದ್ದ. ಪಾಲಕರು ಮದುವೆ ಮಾಡಿಸಲು ಪ್ರಯತ್ನ ನಡೆಸಿದರೂ ಹೆಣ್ಣು ನೀಡಲು ಯಾರೂ ಮುಂದೆ ಬಂದಿಲ್ಲ. ಇದರಿಂದ ಮನನೊಂದು ಕ್ರಿಮಿನಾಶಕ ಸೇವಿಸಿ ಮೃತಪಟ್ಟಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net