ಸಾಯಲೆಂದು ನದಿಗೆ ಜಿಗಿದರೂ ಬದುಕುಳಿದ ಯುವತಿ; ಜೀವ ಉಳಿಸಿದ ಲೈಫ್ ಗಾರ್ಡ್ಸ್​

Kali River
Published on

ಉತ್ತರಕನ್ನಡ: ಇಲ್ಲೊಬ್ಬಳು ಯುವತಿ ಆತ್ಮಹತ್ಯೆ ಮಾಡಿಕೊಳ್ಳಲೆಂದು ನದಿಗೆ ಜಿಗಿದರೂ ಅದೃಷ್ಟವಶಾತ್ ಆಕೆ ಬದುಕುಳಿದಿದ್ದಾಳೆ. ಉತ್ತರಕನ್ನಡ ಜಿಲ್ಲೆಯ ಕಾಳಿ ನದಿ ಪ್ರದೇಶದಲ್ಲಿ ಈ ಪ್ರಕರಣ ನಡೆದಿದೆ.

ಕಾರವಾರದ ಕಾಳಿ ನದಿ ಪ್ರದೇಶಕ್ಕೆ ಬಂದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಳ್ಳಲೆಂದು ಸೇತುವೆಯಿಂದ ನದಿಗೆ ಹಾರಿದ್ದಳು. ಯುವತಿ ಹೀಗೆ ನದಿಗೆ ಹಾರಿದ್ದನ್ನು ಗಮನಿಸಿದ ಸಾರ್ವಜನಿಕರು ಕೂಡಲೇ ಈ ವಿಷಯವನ್ನು ಲೈಫ್​ ಗಾರ್ಡ್​ ಸಿಬ್ಬಂದಿಗೆ ತಿಳಿಸಿದ್ದಾರೆ.

ನಗರದ ಕಾಳಿ ಗಾರ್ಡನ್​ನಲ್ಲಿನ ಲೈಫ್ ಗಾರ್ಡ್ ಸಿಬ್ಬಂದಿಗಳು ಕೂಡಲೇ ನೀರಿಗೆ ಧುಮುಕಿ ಯುವತಿಯನ್ನು ಪ್ರಾಣಾಪಾಯದಿಂದ ರಕ್ಷಣೆ ಮಾಡಿದ್ದಾರೆ. ನದಿಗೆ ಹಾರಿದ್ದರಿಂದ ಆತಂಕಿತಳಾಗಿರುವ ಯುವತಿಯನ್ನು ಕಾರವಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕಾರವಾರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಯುವತಿ ಯಾರು, ಆತ್ಮಹತ್ಯೆ ಪ್ರಯತ್ನ ಯಾಕೆ ಎಂಬ ವಿಚಾರ ಇನ್ನಷ್ಟೇ ತಿಳಿದು ಬರಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net