ಬರ್ತಡೇ ಆಚರಣೆ ಬಳಿಕ ಪ್ರೇಯಸಿ ಹತ್ಯೆ ಕೇಸ್​: ವಿಚಾರಣೆಯಲ್ಲಿ ಮತ್ತಷ್ಟು ಭಯಾನಕ ಸಂಗತಿ ಬಯಲು

BNG Pagal Lover
Published on

ಬೆಂಗಳೂರು: ಪ್ರೇಯಸಿಯ ಹುಟ್ಟುಹಬ್ಬ ಆಚರಣೆ ಮಾಡಿದ ಬಳಿಕ ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ಹಾಗೂ ಪ್ರಿಯಕರ ಪ್ರಶಾಂತ್​ ವಿಚಾರಣೆ ವೇಳೆ ಮತ್ತಷ್ಟು ಭಯಾನಕ ಸಂಗತಿ ಬೆಳಕಿಗೆ ಬಂದಿದೆ

ನವ್ಯ (24) ಕೊಲೆಯಾದ ಯುವತಿ. ಪ್ರಿಯಕರ ಪ್ರಶಾಂತ್​ನಿಂದಲೇ ಬರ್ಬರವಾಗಿ ಹತ್ಯೆಯಾಗಿದ್ದಾಳೆ. ಅದ್ಧುರಿಯಾಗಿ ಹುಟ್ಟುಹಬ್ಬ ಆಚರಿಸಿದ ಬೆನ್ನಲ್ಲೇ ನವ್ಯಾಳ ಕೊಲೆಯಾಗಿದೆ.

BNG Pagal Lover

ಮೊದಲೇ ದೂರು ದಾಖಲಾಗಿತ್ತು

ಈ ಮೊದಲೇ ಇಬ್ಬರ ಪ್ರೇಮ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು ಎಂಬುದು ತಿಳಿದುಬಂದಿದೆ. ಕೋರಮಂಗಲ ಪೊಲೀಸ್ ಠಾಣೆಯಲ್ಲಿ ನವ್ಯ ತಾಯಿ‌ಯಿಂದ ಎನ್​ಸಿಆರ್​ ದಾಖಲಾಗಿತ್ತು. ನವ್ಯಾಗೆ ಪ್ರಶಾಂತ್​ ತುಂಬಾ ಕಾಟ ಕೊಡುತ್ತಿದ್ದಾನೆ ಎಂದು ಆರೋಪಿಸಿ ಮೂರು ತಿಂಗಳ‌ ಹಿಂದೆಯೇ ತಾಯಿ ದೂರು ನೀಡಿದ್ದರು.

ಪ್ರೀತಿಯಲ್ಲಿ ಜಗಳ, ವಿರಹ ಮಾಮೂಲಿ

ಇದಾದ ಬಳಿಕ ಪ್ರಶಾಂತ್​ನನ್ನು ಕರೆದು ಕೋರಮಂಗಲ ಪೊಲೀಸರು ಬುದ್ಧಿವಾದ ಹೇಳಿದ್ದರು. ಇನ್ನೆಂದು ನವ್ಯಾ ಸಹವಾಸಕ್ಕೆ ಹೋಗುವುದಿಲ್ಲ ಎಂದು ಪ್ರಶಾಂತ್ ಹೇಳಿದ್ದ. ಆದರೆ ಪ್ರೀತಿಯಲ್ಲಿ ಜಗಳ, ವಿರಹ ಎಲ್ಲ ಮಾಮೂಲಿ ಎಂಬುದು ಎಲ್ಲರಿಗು ತಿಳಿದಿರುವ ಸಾಮಾನ್ಯ ಸಂಗತಿ. ನವ್ಯಾ ಮತ್ತು ಪ್ರಶಾಂತ್​ ಮತ್ತೆ ಪರಸ್ಪರ ಸಂಪರ್ಕದಲ್ಲಿದ್ದರು.

BNG Pagal Lover

ಫೋಟೋ ಹಚ್ಚೆ ಹಾಕಿಸಿಕೊಂಡಿದ್ದ

ಹುಟ್ಟುಹಬ್ಬ ಆಚರಿಸಲು ತನ್ನ ರೂಮಿಗೆ ಕರೆದು ಆಕೆಯನ್ನು ಪ್ರಶಾಂತ್​ ಹತ್ಯೆ ಮಾಡಿದ್ದಾನೆ. ನವ್ಯಾ ಮೇಲೆ ತನ್ನ ಪ್ರಾಣವನ್ನೇ ಇಟ್ಟುಕೊಂಡಿದ್ದ ಪ್ರಶಾಂತ್, ಕೊನೆಗೆ ಆಕೆಯ ಪ್ರಾಣವನ್ನೇ ತೆಗೆದುಬಿಟ್ಟಿದ್ದಾನೆ. ತನ್ನ ಮೈಮೇಲೆ ನವ್ಯಾಳ ಫೋಟೋವನ್ನು ಹಚ್ಚೆ ಹಾಕಿಸಿಕೊಂಡಿದ್ದ. ಆಕೆಯ ಹೆಸರನ್ನು ದೇಹದ ತುಂಬೆಲ್ಲ ಬರೆಸಿಕೊಂಡಿದ್ದ.

ಕೊಲೆ‌ ಬಳಿಕ ಪ್ರಶಾಂತ್ ತಲೆಗೆ ಹೊಳೆದಿದ್ದೇನು?

ನವ್ಯಾಳನ್ನು ಕೊಂದ ಬಳಿಕ ಐದು ಗಂಟೆಗಳ ಕಾಲ ಪ್ರಶಾಂತ್​ ಮೃತದೇಹದ ಜೊತೆಗಿದ್ದ. ಈ ವೇಳೆ ನವ್ಯಾಳ ಮೃತದೇಹವನ್ನು ತುಂಡು ತುಂಡಾಗಿ ಮಾಡಿ ಎಸೆಯುವ ಪ್ಲಾನ್​ ಮಾಡಿಕೊಂಡಿದ್ದ. ಅಷ್ಟೇ ಅಲ್ಲ ತಾನೂ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಯೋಚಿಸಿದ್ದ. ಆದರೆ, ಅದ್ಯಾವುದನ್ನೂ ಮಾಡದೇ ಪೊಲೀಸರ ಮುಂದೆ ಶರಣಾದ.

BNG Pagal Lover

ಅನುಮಾನ

ನವ್ಯಾ ರೆಸ್ಟ್ ರೂಮ್​​ಗೆ ಹೋದಾಗಲೇ ಪ್ರಶಾಂತ್​ಗೆ ಅನುಮಾನ ಶುರುವಾಗಿತ್ತು. ಏಕೆಂದರೆ, ಮೊಬೈಲ್ ಅನ್ನು ತನ್ನ ಜತೆ ನವ್ಯಾ ತೆಗೆದುಕೊಂಡು ಹೋಗಿದ್ದಳು. ಹೊರ ಬಂದ ಬಳಿಕ ಮೊಬೈಲ್ ಕೊಡುವಂತೆ ಕೇಳಿದ್ದ. ಕೊಡದಿದ್ದಾಗ ತಾನೇ ಚಾಕುವಿನಿಂದ ಚುಚ್ಚಿಕೊಳ್ಳೋದಾಗಿ ಬೆದರಿಸಿದ್ದ. ಕೊನೆಗೆ ನವ್ಯಾಳ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ.

ಸದ್ಯ ಆರೋಪಿ ಪ್ರಶಾಂತ್​ನನ್ನು ರಾಜಗೋಪಾಲನಗರ ಠಾಣೆಯೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)

BNG Pagal Lover
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net