ಇತ್ತೀಚೆಗಷ್ಟೇ ಮದ್ವೆಯಾಗಿದ್ದ ಯುವ ವೈದ್ಯೆ ಫ್ರೆಂಡ್​ ಫ್ಲ್ಯಾಟ್​ನಲ್ಲಿ ಶವವಾಗಿ ಪತ್ತೆ

Photo of Kerala Young Doctor
Published on

ಕೊಯಿಕ್ಕೋಡ್: ಯುವ ವೈದ್ಯೆಯೊಬ್ಬಳು ಸ್ನೇಹಿತೆಯ ಅಪಾರ್ಟ್​ಮೆಂಟ್​ ಫ್ಲ್ಯಾಟ್​ನಲ್ಲಿ ಬುಧವಾರ (ಮಾ.01) ಬೆಳಗ್ಗೆ 10 ಗಂಟೆ ಸುಮಾರಿಗೆ ನಿಗೂಢವಾಗಿ ಮೃತಪಟ್ಟಿದ್ದಾಳೆ.

ಮೃತಳನ್ನು ಥಾನ್ಸಿಯಾ (25) ಎಂದು ಗುರುತಿಸಲಾಗಿದೆ. ಈಕೆ ಕೊಯಿಕ್ಕೋಡ್‌ನ ಮಲಬಾರ್ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿನಿಯಾಗಿದ್ದಳು. ಥಾನ್ಸಿಯಾ ವಯನಾಡಿನ ಕಣಿಯಂಪಟ್ಟದ ನಿವಾಸಿ. ಬುಧವಾರ ಬೆಳಗ್ಗೆ 10 ಗಂಟೆಗೆ ಕೊಯಿಕ್ಕೋಡ್​ನ ಪಲಹಿಯಲ್ಲಿರುವ ಫ್ಲ್ಯಾಟ್​ನಲ್ಲಿ ಶವವಾಗಿ ಪತ್ತೆಯಾದಳು.

ನಿನ್ನೆ (ಮಾ.01) ಥಾನ್ಸಿಯಾ ತನ್ನ ಸ್ನೇಹಿತೆಯ ಫ್ಲಾಟ್‌ಗೆ ಬಂದಿದ್ದಳು. ಇಂದು ಬೆಳಗ್ಗೆ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿ, ಕೊಠಡಿ ತೆರೆದು ನೋಡಿದಾಗ ಆಕೆ ಶವವಾಗಿ ಪತ್ತೆಯಾಗಿದ್ದಾಳೆ. ಆಕೆಯ ಸ್ನೇಹಿತೆ​ ಕೂಡ ಡಾಕ್ಟರ್​. ಮೃತ ಥಾನ್ಸಿಯಾಗೆ ಮದುವೆಯಾಗಿದ್ದು, ಆಕೆಯ ಗಂಡನ ಹೆಸರು ಪರೀತ್ ಎಂದು. ಇತ್ತೀಚೆಗಷ್ಟೇ ಮದುವೆ ಆಗಿದ್ದಳು.

ಮೃತದೇಹವನ್ನು ಪೊಲೀಸರು ಕೊಯಿಕ್ಕೋಡ್ ವೈದ್ಯಕೀಯ ಕಾಲೇಜು ಶವಾಗಾರಕ್ಕೆ ರವಾನಿಸಿದ್ದಾರೆ. ಹೆಚ್ಚಿನ ಪರೀಕ್ಷೆಯ ನಂತರ ಸಾವಿನ ಕಾರಣದ ಬಗ್ಗೆ ಹೆಚ್ಚಿನ ಮಾಹಿತಿ ಸ್ಪಷ್ಟವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಸ್ಮಾರಕ್ಕೆ ತನ್ಸಿಯಾ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net