ಗಿಲ್​ಲೀಡ್​ ಸೈನ್ಸಸ್​ನ ಕೋವಿಡ್​ ಚುಚ್ಚುಮದ್ದು ಒಂದರ ಬೆಲೆ ಕೇಳಿದರೆ ಹೌಹಾರುತ್ತೀರಾ!

covid vaccine
Published on

ನವದೆಹಲಿ: ಜಾಗತಿಕವಾಗಿ ಬಾಧಿಸುತ್ತಿರುವ ಕೋವಿಡ್​-19 ಸಾಂಕ್ರಾಮಿಕಕ್ಕೆ ರೋಗನಿರೋಧಕ ಚುಚ್ಚುಮದ್ದು ಕಂಡು ಹಿಡಿಯಲು ವಿಶ್ವದ ವಿವಿಧ ಸಂಸ್ಥೆಗಳ ರೀತಿಯಲ್ಲೇ ಅಮೆರಿಕದ ಗಿಲ್​ಲೀಡ್​ ಸೈನ್ಸಸ್​ ಇಂಕ್​ ಸಂಸ್ಥೆ ಕೂಡ ಪ್ರಯತ್ನ ಮಾಡುತ್ತಿದೆ. ಅದೀಗ ರೆಂಡೆಸಿವಿರ್​ ಎಂಬ ಔಷಧ ಆಧಾರಿತ ಚುಚ್ಚುಮದ್ದನ್ನು ಸಿದ್ಧಪಡಿಸಿದ್ದು, ಅದರ ಕ್ಲಿನಿಕಲ್​ ಪರೀಕ್ಷೆ ಅಂತಿಮ ಘಟ್ಟದಲ್ಲಿದೆ.

ಇದೇ ವೇಳೆ ಆ ಒಂದು ಚಚ್ಚುಮದ್ದಿನ ಬೆಲೆಯ ಕುರಿತು ಮಾಹಿತಿ ಬಹಿರಂಗವಾಗಿದ್ದು, ಒಂದು ಚುಚ್ಚುಮದ್ದಿಗೆ 3,84,200 ರೂ. ದರ ನಿಗದಿಯಾಗಿದೆ.

ಜಾಗತಿಕವಾಗಿ 10 ದಶಲಕ್ಷಕ್ಕೂ ಹೆಚ್ಚು ಕೋವಿಡ್​-19 ಸೋಂಕಿತರು ಇದ್ದಾರೆ. ಅಲ್ಲದೆ, ಸೋಂಕು ತುಂಬಾ ವೇಗವಾಗಿ ಪ್ರಸಾರವಾಗುತ್ತಿರುವ ಹಿನ್ನೆಲೆಯಲ್ಲಿ ಈ ಪಿಡುಗನ್ನು ನಿಯಂತ್ರಿಸಲು ಶೀಘ್ರವಾಗಿ ರೋಗನಿರೋಧಕ ಚುಚ್ಚುಮದ್ದನ್ನು ಕಂಡುಹಿಡಿಯುವ ಅವಶ್ಯಕತೆ ಇದೆ.

ಇನ್ಹೇಲರ್​ ಸಂಶೋಧನೆ: ರೆಂಡೆಸಿವಿರ್​ ಚುಚ್ಚುಮದ್ದಿನ ಜತೆಗೆ ಗಿಲ್​ಲೀಡ್​ ಸೈನ್ಸಸ್​ ಇಂಕ್​ ರೆಂಡೆಸಿವಿರ್​ನ ಇನ್ಹೇಲರ್​ ಅನ್ನೂ ಸಿದ್ಧಪಡಿಸಲು ತಯಾರಿ ನಡೆಸಿದೆ. ಇದರ ಕ್ಲಿನಿಕಲ್​ ಪರೀಕ್ಷೆಯನ್ನು ಕೂಡ ಶೀಘ್ರದಲ್ಲೇ ಆರಂಭಿಸುವುದಾಗಿ ಕಂಪನಿ ಹೇಳಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net