ಲಸಿಕೆಗೆ ಎಲ್ಲರೂ ಬರ್ಬೇಡಿ.. ಈ ಮೆಸೇಜ್​ ಇದ್ದವರಿಗೆ ಮಾತ್ರ ಲಸಿಕೆ ಪಡೆಯೋಕೆ ಅನುಮತಿ!

ವಅಚಚಿನೆ
Published on

ಬೆಂಗಳೂರು: ಮೇ 10ರಿಂದ 18ರಿಂದ 45 ವರ್ಷದೊಳಗಿನವರಿಗೂ ಕರೊನಾ ಲಸಿಕೆ ನೀಡಲಾಗುವುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಆದರೆ ಲಸಿಕೆ ಕೊಡುತ್ತಾರೆಂದ ಮಾತ್ರಕ್ಕೆ ಬೇಕಾಬಿಟ್ಟಿ ಬಂದು ಬಿಡಬೇಡಿ.. ಈ ಎಲ್ಲ ಕ್ರಮವನ್ನು ನೀವು ಅನುಸರಿಸಿದ್ದರೆ ಮಾತ್ರವೇ ಬನ್ನಿ ಎಂದು ಸೂಚನೆಯನ್ನೂ ನೀಡಲಾಗಿದೆ.

18ರಿಂದ 44 ವರ್ಷದೊಳಗಿನವರು ಲಸಿಕೆ ಪಡೆಯುವುದಕ್ಕೆ ಆನ್​ಲೈನ್​ ಮೂಲಕ ನೋಂದಾಯಿಸಿಕೊಂಡಿರಬೇಕು. ಅವರಿಗೆ ನೋಂದಾವಣಿಯ ನಂತರ ಸಮಯ ನಿಗದಿಯ ಮೆಸೇಜ್​ ಒಂದು ಸರ್ಕಾರದಿಂದ ಬಂದಿರುತ್ತದೆ. ಆ ಮೆಸೇಜ್​ ಇದ್ದವರಿಗೆ ಮಾತ್ರ ಲಸಿಕೆ ನೀಡಲಾಗುವುದು.

ಈ ಮೆಸೇಜ್​ನ್ನು ಚೆಕ್​ ಮಾಡಲೆಂದೇ ಲಸಿಕಾ ಕೇಂದ್ರಗಳಲ್ಲಿ ಪೊಲೀಸರು ಇರುತ್ತಾರೆ. ಸರಿಯಾದ ಮೆಸೇಜ್​ ಇದ್ದವರಿಗೆ ಮಾತ್ರವೇ ಲಸಿಕೆ ಪಡೆಯಲು ಅನುಮತಿ ನೀಡಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net