

Mango recipe: ಮಾವು ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ? ಅದರಲ್ಲೂ ಮಾವಿನ ಸೀಸನ್ನಲ್ಲಿ ಹಲವಾರು ಬಗೆಬಗೆಯ ಮಾವಿನ ಹಣ್ಣುಗಳನ್ನು ನೋಡಬಹುದು. ಅದೇ ರೀತಿ ಮಾವಿನಿಂದ ತಯಾರಿಸಿದ ಖಾದ್ಯಗಳನ್ನು ಹುಡುಕಿಕೊಂಡು ಜನ ಅಲೆದಾಡುವುದನ್ನು ಗಮನಿಸಿದ್ದೇವೆ. ಈಗ ಮಾವಿನ ಸೀಸನ್ ಮುಗಿಯುತ್ತಾ ಬಂದಿದ್ದು, ಮಾವು ಪ್ರಿಯರಿಗೆ ಬೇಸರ ತಂದಿದೆ. ನಾವು ಇಂದು ಹೇಳುವ ರೆಸಿಪಿಯನ್ನು ಮಾವಿಹಣ್ಣು ಸೀಸನ್ ಮುಗಿಯುವ ಮೊದಲೇ ಮನೆಯಲ್ಲಿ ಮಾಡಿ ಸವಿಯಿರಿ...
ಬೇಕಾಗುವ ಪದಾರ್ಥಗಳು
100 ಗ್ರಾಂ ಬೆಲ್ಲ
1/2 ಲೀಟರ್ ನೀರು
2 ಚಮಚ ನಿಂಬೆ ರಸ
1 ಚಮಚ ಏಲಕ್ಕಿ ಪುಡಿ
1 ಚಮಚ ಒಣ ಶುಂಠಿ ಪುಡಿ
½ ಚಮಚ ಕರಿಮೆಣಸಿನ ಪುಡಿ
200 ಗ್ರಾಂ ಹುಣಸೆಹಣ್ಣು
50 ಗ್ರಾಂ ಕತ್ತರಿಸಿದ ಹಸಿ ಮಾವಿನಕಾಯಿ
ಅಲಂಕಾರಕ್ಕಾಗಿ ತುಳಸಿ ಎಲೆಗಳು
ಮಾಡುವ ವಿಧಾನ:
ಮೊದಲು ಒಂದು ಪಾತ್ರೆಯಲ್ಲಿ ಬೆಲ್ಲವನ್ನು ಕರಗಿಸಿಟ್ಟುಕೊಳ್ಳಬೇಕು. ಒಂದು ಬೌಲ್ನಲ್ಲಿ ಹುಣಸೆ ಹಣ್ಣನ್ನು ನೆನಸಿ, ರಸ ತೆಗೆದುಕೊಳ್ಳಬೇಕು. ನಂತರ ಏಲಕ್ಕಿ ಪುಡಿ, ಶುಂಠಿ ಪುಡಿ, ಕರಿಮೆಣಸಿನ ಪುಡಿ, ನಿಂಬೆ ರಸವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ಕತ್ತರಿಸಿದ ಮಾವಿನ ಕಾಯಿಯನ್ನು ಬೆರಸಿ ಕೆಲವು ಸಮಯ ಹಾಗೆಯೇ ಬಿಡಬೇಕು. ನಂತರ ಅಷ್ಟನ್ನೂ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ತುಳಸಿ ಎಲೆಗಳಿಂದ ಅಲಂಕರಿಸಿದರೆ ಹಸಿ ಮಾವಿನ ಶುಂಠಿ ಪಾನಕ ಸವಿಯಲು ಸಿದ್ಧವಾಗುತ್ತದೆ.
ಇದನ್ನೂ ಓದಿ:ಜನಮುಖಿ ಪತ್ರಿಕೋದ್ಯಮದಲ್ಲಿ ಸಾರ್ಥಕ್ಯ
2 ಕಪ್ ಹಸಿ ಮಾವಿನ ತುಂಡುಗಳು
1½ ಕಪ್ ಸಕ್ಕರೆ
½ ಚಮಚ ಏಲಕ್ಕಿ ಪುಡಿ
1 ಚಮಚ ಜೀರಿಗೆ ಪುಡಿ
¼ ಚಮಚ ಕರಿಮೆಣಸಿನ ಪುಡಿ
ರುಚಿಗೆ ಉಪ್ಪು
ಮಾಡುವ ವಿಧಾನ:
ಮೊದಲು ಒಂದು ಪಾತ್ರೆಯನ್ನು ತೆಗೆದುಕೊಳ್ಳಬೇಕು ಆನಂತರ ಹಸಿ ಮಾವಿನಕಾಯಿಯನ್ನು ಸ್ವಲ್ಪ ನೀರಿನೊಂದಿಗೆ 3 ನಿಮಿಷಗಳ ಕಾಲ ಮೈಕ್ರೋವೇವ್‌ನಲ್ಲಿ ಬೇಯಿಸಿ, ಅದಕ್ಕೆ ಸಕ್ಕರೆ ಸೇರಿಸಿ ಇನ್ನೊಂದು 3 ನಿಮಿಷಗಳ ಕಾಲ ಮೈಕ್ರೋವೇವ್‌ನಲ್ಲಿ ಇರಿಸಬೇಕು. ತದನಂತರ ಸಲ್ಲರೆ, ಏಲಕ್ಕಿಪುಡಿ, ಜೀರಿಗೆ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, ತಣ್ಣಗಾದ ನಂತರ ರುಬ್ಬಿ ಸವಿಯಬೇಕು.