

ಲಖನೌ: ಬಿಹಾರದ ವಿಧಾನ ಸಭಾ ಚುನಾವಣೆ ಮತ್ತು 10 ರಾಜ್ಯಗಳ ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಜಯಭೇರಿ ಬಾರಿಸಿದೆ. ಪಕ್ಷದ ಈ ಸಾಧನೆಗೆ ಪ್ರಶಂಸೆಗಳ ಹೊಳೆ ಹರಿದು ಬರುತ್ತಿದೆ. ಮೋದಿ ಇದ್ದ ಮೇಲೆ ಸಾಧ್ಯವಿಲ್ಲ ಎನ್ನುವ ಮಾತೇ ಇಲ್ಲ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ ಕೂಡ ಹೊಗಳಿದ್ದಾರೆ.
'ಮೋದಿ ಹೈ ತೋ ಮುಮ್ಕಿನ್ ಹೈ', ನರೇಂದ್ರ ಮೋದಿಯವರು ಇದ್ದ ಮೇಲೆ ಗೆಲುವು ಸಾಧ್ಯವಾಗಿದೆ ಎಂದು ಯೋಗಿ ಆದಿತ್ಯಾನಾಥ ಹೇಳಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಬಿಹಾರ ಚುನಾವಣೆ ಮತ್ತು ಭಾರತದಾದ್ಯಂತ ನಡೆದ ಉಪಚುನಾವಣೆಗಳಲ್ಲಿ ಪಕ್ಷ ಅಸಾಧಾರಣ ಪ್ರದರ್ಶನ ಕೊಟ್ಟಿದೆ. ಇದು ಅವರಿಂದ ಮಾತ್ರವೇ ಸಾಧ್ಯ ಎಂದು ಅವರು ಹೇಳಿದ್ದಾರೆ.
ಕರ್ನಾಟಕದಲ್ಲಿ ಉಪ ಚುನಾವಣೆ ನಡೆದ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದೆ. ಬಿಹಾರದಲ್ಲಿಯೂ ಮುನ್ನಡೆಯನ್ನು ಕಾಯ್ದುಕೊಂಡಿದೆ. (ಏಜೆನ್ಸೀಸ್)