ಪ್ಯಾಲೆಸ್ತೀನ್​​ ಹೆಸರಿನ ಬ್ಯಾಗ್​ ಹಿಡಿದು ಸಂಸತ್ತಿನಲ್ಲಿ ವಯನಾಡು ಸಂಸದೆ ಓಡಾಟ; ಪ್ರಿಯಾಂಕಾ ಗಾಂಧಿ ವಿರುದ್ಧ ಸಿಎಂ Yogi Adityanath ಹೇಳಿದ್ದೇನು?

Untitled design - 2024-12-17T170429.661
Published on

ಲಖನೌ: ಪ್ಯಾಲೆಸ್ತೀನ್​​ ಎಂದು ಬರೆದಿರುವ ಬ್ಯಾಗನ್ನು ಸೋಮವಾರ(ಡಿಸೆಂಬರ್​ 16) ಸಂಸತ್ತಿಗೆ ತಂದಿದ್ದಕ್ಕಾಗಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ವಯನಾಡು ಲೋಕಸಭಾ ಸಂಸದ ಪ್ರಿಯಾಂಕಾ ಗಾಂಧಿ ವಿರುದ್ಧ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(Yogi Adityanath) ವಾಗ್ದಾಳಿ ನಡೆಸಿದ್ದಾರೆ.

ಮಂಗಳವಾರ ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ ಯೋಗಿ, ಕಾಂಗ್ರೆಸ್ ನಾಯಕರೊಬ್ಬರು ಪ್ಯಾಲೆಸ್ತೀನ್ ಎಂದು ಬರೆದಿರುವ ಬ್ಯಾಗ್​ ಹಿಡಿದು ಸಂಸತ್ತಿನಲ್ಲಿ ತಿರುಗಾಡುತ್ತಿದ್ದರು. ಆದರೆ ನಾವು ಉತ್ತರ ಪ್ರದೇಶದ ಯುವಕರನ್ನು ಇಸ್ರೇಲ್‌ಗೆ ಕಳುಹಿಸುತ್ತಿದ್ದೇವೆ. ಉತ್ತರ ಪ್ರದೇಶದಿಂದ ಸುಮಾರು 5600 ಯುವಕರು ಕಟ್ಟಡ ನಿರ್ಮಾಣ ಕೆಲಸ ಮಾಡಲು ಇಸ್ರೇಲ್‌ಗೆ ಹೋಗಿದ್ದಾರೆ. ಪ್ರತಿಯೊಬ್ಬ ಯುವಕರು ಅಲ್ಲಿ ಉಳಿದುಕೊಳ್ಳಲು ಮತ್ತು ತಿನ್ನಲು ಉಚಿತವಾಗಿದೆ. ಪ್ರತಿ ತಿಂಗಳು 1.5 ಲಕ್ಷ ರೂಪಾಯಿ ಪಡೆಯುತ್ತಿದ್ದಾರೆ. ಭದ್ರತೆಯನ್ನು ಸಹ ಸಂಪೂರ್ಣವಾಗಿ ಖಾತರಿಪಡಿಸಲಾಗಿದೆ ಎಂದರು.

ಇಸ್ರೇಲ್ ರಾಯಭಾರಿ ನಮ್ಮ ಬಳಿಗೆ ಬಂದಿದ್ದು, ಇನ್ನು ಹೆಚ್ಚು ಮಂದಿ ಉತ್ತರ ಪ್ರದೇಶದ ಹುಡುಗರು ಬೇಕು ಎಂದು ಕೇಳಿದರು. ಏಕೆಂದರೆ ಯುಪಿ ಹುಡುಗರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದರು.

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಪ್ಯಾಲೆಸ್ತೀನ್ ಎಂದು ಬರೆದ ಬ್ಯಾಗ್‌ನೊಂದಿಗೆ ಸೋಮವಾರ ಸಂಸತ್ತಿಗೆ ಬಂದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಬಾಂಗ್ಲಾದೇಶಿ ಹಿಂದೂಗಳ ನೋವು ಪ್ರಿಯಾಂಕಾ ಅವರಿಗೆ ಕಾಣುತ್ತಿಲ್ಲ ಎಂದು ಹೇಳಿತ್ತು. ಇದಾದ ಬಳಿಕ ಮಂಗಳವಾರ(ಡಿಸೆಂಬರ್​ 17) ಪ್ರಿಯಾಂಕಾ ಗಾಂಧಿ ಬಾಂಗ್ಲಾದೇಶಿ ಹಿಂದೂಗಳಿಗೆ ಬೆಂಬಲವನ್ನು ಸೂಚಿಸಲು ಬಾಂಗ್ಲಾದೇಶವನ್ನು ಸೂಚಿಸುವ ಬ್ಯಾಗ ಅನ್ನು ಹೊತ್ತು ಸಂಸತ್ತಿಗೆ ತೆರಳಿದ್ದರು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net