

ಪ್ರಾಚೀನ ಮಹರ್ಷಿಗಳು- ‘ಯೋಗೀಶ್ವರಂ ಶಿವಂ ವಂದೇಃ ವಂದೇ ಯೋಗೇಶ್ವರಂ ಹರಿಮ್ ಎಂದರು. ಯೋಗೀಶ್ವರ ಆದಿಯೋಗಿ ಶಿವನೆಂದು, ಯೋಗೇಶ್ವರ ನಾರಾಯಣ ಕೃಷ್ಣನೆಂದು ಶ್ರದ್ಧೆಯಿದೆ. ಇವರೇ ಮೊದಲ ಯೋಗಾಚಾರ್ಯರೆಂಬುದಾಗಿಯೂ ನಂಬಿಕೆಯಿದೆ. ಶಂಕರ-ನಾರಾಯಣರಲ್ಲಿ ಭೇಧವಿಲ್ಲದಿದ್ದರೂ ಸಾಂಪ್ರದಾಯಿಕವಾಗಿ ಈರ್ವರ ಹೆಸರಿನಲ್ಲೂ ಪ್ರತ್ಯೇಕ ಯೋಗ ಸಂಪ್ರದಾಯಗಳು ರೂಢಿಯಲ್ಲಿವೆ. ಉಪನಿಷತ್ತುಗಳಲ್ಲಿ ವಿಷ್ಣು ಮತ್ತು ರುದ್ರರಿಂದಲೆ ಹಿರಣ್ಯ ಗರ್ಭನೆಂದೆನ್ನಿಸಿಕೊಂಡಿರುವ ಬ್ರಹ್ಮನಿಗೆ ಯೋಗೋಪದೇಶವಾಯಿತೆಂದೂ ಮತ್ತು ಆತನು ಅನೇಕ ಋಷಿಮುನಿ ಮಹರ್ಷಿಗಳಿಂದ ಆ ಯೋಗವಿದ್ಯೆಯನ್ನು ಪ್ರಚಾರಪಡಿಸಿದನೆಂದು ತಿಳಿಯುತ್ತದೆ. ನಾರದ ಮುನಿಯಿಂದ ಭಕ್ತಿಯೋಗ ಕ್ಕೆ ನಾಂದಿಯಾ ದರೆ, ಮತ್ಸೇಂದ್ರ- ಗೋರಖಾದಿಗಳಿಂದ ನಾಥಯೋಗ ಪರಂಪರೆ ದತ್ತಯೋಗ ಸಂಪ್ರದಾಯ ಬೆಳಗಿದೆ. ಶ್ವೇತ- ಸವದಾ- ದಮನಾದಿ ಮುನೀಶ್ವರರಾದ ಇಪ್ಪತ್ತೆಂಟು ಯೋಗಾಚಾರ್ಯರು ಯೋಗಕ್ಕೆ ಸಾಧನಗಳಾದ ಮಂತ್ರಯೋಗ, ಲಯಯೋಗ, ಹಠ-ರಾಜಯೋಗಗಳನ್ನು ಪ್ರವರ್ತಿಸಿ ಪ್ರಸಾರಗೊಳಿಸಿದರೆಂದು ನಿಜಗುಣ ಶಿವಯೋಗಿಗಳು ಸ್ಪಷ್ಟಪಡಿಸಿರುವರು. ‘ವಿವೇಕ ಚಿಂತಾಮಣಿ’ಯ ಯೋಗಪಾದದ ಪ್ರಾರಂಭದಲ್ಲಿ ಯೋಗಾಚಾರ್ಯರ ಲಕ್ಷಣಗಳನ್ನು ಹೇಳುವ ಪ್ರಸಂಗದಲ್ಲಿ ‘ಅಷ್ಟವಿಂಶತಿ ಯೋಗಾಚಾರ್ಯರಾದ ಮುನಿಶ್ವರರರಾದೊಡೆ ಒಬ್ಬೊಬ್ಬರಿಗೆ ನಾಲ್ವರು ಶಿಷ್ಯರುಗಳಾಗಿ ಶ್ವೇತ ಶಿಖಾದಿ ಗರ್ಗ ಮಿತ್ರ ಕರಿಷ್ಯನೆಂಬಾತಂ ಕಡೆಯಾದ ನೂರ ಹನ್ನೆರಡು ಶಿಷ್ಯರೊಡಗೂಡಿ ಭಸಿತಾಕ್ಷಮಾಲಾ ಯೋಗದಂಡ ಯೋಗಪಟ್ಟಾದಿಗಳಿಂದಶ್ವತರಾಗಿ ಏಕಶಿಖಿ, ಬಹುಶಿಖಿ ಕೇಶಪಾಶ ಮಂಡನಂಗಳುಳ್ಳವರಾಗಿ ಶಾಂತತೇಜೋಮಯರಾಗಿರ್ಪರ್’ ಎಂದು ವಿವರಿಸಿದರು.
ಈ ಯೋಗಾಚಾರ್ಯರ ದೇಶ-ಕಾಲ-ಮತಗಳ ಬಗೆಗಿನ ಇತಿಹಾಸಿಕ ಪರಂಪರೆಯನ್ನು ಉಪನಿಷತ್ತು, ಸ್ಮೃತಿ-ಪುರಾಣ ಮತ್ತು ಶಿಲಾಶಾಸನ ಗಳ ಆಧಾರದಿಂದ ನಿರ್ದಿಷ್ಟವಾಗಿ ಕಂಡು ಹಿಡಿಯಬಹುದುದಾಗಿದೆ. ಮೊದಲಿನ 28 ಯೋಗಾಚಾರ್ಯ ರನ್ನು ಕುರಿತು ಈ ದಿಶೆಯಲ್ಲಿ ಹೆಚ್ಚಿನ ಸಂಶೋಧನೆ ನಡೆಯಬೇಕಾಗಿದೆ. ಯೋಗಾಚಾರ್ಯ ವಿಷಯವಾಗಿ ಪುರಾಣ-ಶಾಸನಗಳಲ್ಲಿ ಸಾಕಷ್ಟು ಐತಿಹಾಸಿಕ ಸಾಮಗ್ರಿ ದೊರೆತಿದೆ. ಆದುದರಿಂದ ಉಳಿದ ಯೋಗಾಚಾರ್ಯರೂ ಐತಿಹಾಸಿಕ ವ್ಯಕ್ತಿಗಳೇ ಎನ್ನುವಲ್ಲಿ ಸಂದೇಹವಿಲ್ಲ.
ಪಾಶುಪತ ಯೋಗಾಚಾರ್ಯ ಲಕುಲೀಶನ ಅವತಾರದ ಮಹಿಮೆಯು ವಾಯು, ಕೂರ್ಮ, ಲಿಂಗ ಮಹಾಪುರಾಣಗಳಲ್ಲಿ ವರ್ಣಿತವಾಗಿದೆ. ಕ್ರಿ.ಶ. 400 ಗುಪ್ತರಾಜರ ಕಾಲದಲ್ಲಿ ರಚಿತವಾದ ‘ವಾಯುಪುರಾಣ’ ಪಾಶುಪತ ಯೋಗಿಗಳ ವಿಷಯವಾಗಿ ವಿವರಣೆ ನೀಡುತ್ತದೆ. ಉದಯಪುರದ ಪ್ರಸಿದ್ಧ ಏಕಲಿಂಗ ದೇವಸ್ಥಾನದಲ್ಲಿಯ ಶಾಸನ (ಕ್ರಿ.ಶ. 971-72)ಮತ್ತು ಹಿತ್ರಾ ಪ್ರಶಸ್ತಿಯಲ್ಲಿ ಲಕುಲೀಶನ ಸುತ್ತಿ ವಿಶೇಷವಾಗಿದೆ. ಕ್ರಿ.ಪೂ. 58-25 ರಲ್ಲಿದ್ದ ಹುವಿಷ್ಕ ಸಾಮ್ರಾಟನ ನಾಣ್ಯಗಳಲ್ಲಿ ಗಡ್ಡಧಾರಿ ಯೋಗಿಯ ಸಂಕೇತವಿದೆ. ಶಿವನ ಅವ ತಾರ ಪುರುಷನೆನಿಸಿದ ಲಕುಲೀಶನೇ ಎಂದು
ಪಂಡಿತರ ಅಭಿಪ್ರಾಯವಾಗಿದೆ. ಈ ಯೋಗಾಚಾರ್ಯರು ಯುಗಶ್ರಮದ ಕಾಲ ವನ್ನು ನಿರ್ಧರಿಸುವುದು ಕಷ್ಟಸಾಧ್ಯ. ಲಕ್ಷ ವರ್ಷಗಳು ಪ್ರಾಗೈತಿಹಾಸಿಕ ಯೋಗಶ್ರಮ ವೈಜ್ಞಾನಿಕವೆನ್ನುವಲ್ಲಿ ಸಂದೇಹವೇ ಇಲ್ಲ. ಸುಮಾರು ಐದುಸಾವಿರ ವರ್ಷಗಳ ಪೂರ್ವದ ದ್ವಾಪರಯುಗದಲ್ಲಿ ಯೋಗೇಶ್ವರ ಶ್ರೀಕೃಷ್ಣನ ಯೋಗ ಪರಂಪರೆಯನ್ನು ವೇದವ್ಯಾಸ ಮಹರ್ಷಿಗಳು ‘ಭಗವದ್ಗೀತೆ’ಯ ರೂಪದಲ್ಲಿ ಹೇಳಿರುವರು. ವಿವಶ್ವತ-ಮನು-ಇಕ್ಷ್ವಾಕು ಪರಂಪರೆಯಿಂದ ಈ ಯೋಗವಿದ್ಯೆ ಜನಕಾದಿ ರಾಜರ್ಷಿಗಳಿಗೆ ಪ್ರಾಪ್ತವಾಯಿತು.ಬಹುಕಾಲದಿಂದ ನಷ್ಟವಾಗಿದ್ದ ಪುರಾತನ ಯೋಗವನ್ನು ಶ್ರೀಕೃಷ್ಣನು ಅರ್ಜುನನಿಗೆ ಉಪದೇಶಿಸಿದನು. ಇಲ್ಲಿ ಭಗವಂತ ಭವಾಂತರದ ಯೋಗಿ ಪರಂಪರೆಯನ್ನು ಸವರ್ಥಿಸಿಕೊಂಡಿರುವನು. ಭಗವದ್ಗೀತೆಯಲ್ಲಿ ಕೃಷ್ಣಾವತಾರಕ್ಕೂ ಸಾವಿರಾರು ವರ್ಷ ಪೂರ್ವದ ಕಪಿಲಯೋಗಿಯ ನಿರೀಶ್ವರ ಸಾಂಖ್ಯ ಮತ್ತು ಸಶೇಶ್ವ ಪತಂಜಲಿ ಯೋಗದ ಪರಂಪರೆಯನ್ನು ಸ್ಪಷ್ಟವಾಗಿ ಗುರ್ತಿಸಬಹುದಾಗಿದೆ.