ಭಕ್ತಿಯೋಗ ಹರಿದಾಸರು ಕಂಡ ಸಗುಣ- ನಿರ್ಗುಣೋಪಾಸನೆಯ ಮಾರ್ಗ

Bhagavadgite
Published on
ಭಗವಾನ್​ ಶ್ರೀ ಕೃಷ್ಣನಿಂದ ಪ್ರಾರಂಭವಾದ ಮಹಾಭಾರತ, ಭಗವದ್ಗೀತೆ, ಭಾಗವತ, ಪುರಾಣ ಮತ್ತು ವೈಷ್ಣವಾಗಮಗಳನ್ನುಳ್ಳ ಭಾಗವತ ಧರ್ಮವು ಭಕ್ತಿಯನ್ನು ಎರಡು ಮುಖದಲ್ಲಿ ಗುತಿರ್ಸುತ್ತದೆ. ಅದು ಭಕ್ತಿ ಮತ್ತು ವಿರಕ್ತಿ. ಭಕ್ತಿಯಲ್ಲಿ "ಗೌಣೀ ಭಕ್ತಿ' ಮತ್ತು "ಪರಾಭಕ್ತಿ' ಎಂದು ಎರಡು ವಿಧ, ಇದನ್ನೇ ಬಾಹ್ಯಾಚಾರ ಹಾಗೂ ಮುಖಭಕ್ತಿಗಳೆಂದೂ ಕರೆಯುವುದುಂಟು. ಗೌಣೀಭಕ್ತಿಯಲ್ಲಿ ಗುಣಭೇದ- ಆರ್ತಭೇದ ಎಂದು ಎರಡು ವಿಧ. ಇದನ್ನು ತ್ರಿಗುಣಗಳೊಂದಿಗೂ ಹೆಸರಿಸಬಹುದು. ಎರಡನೆಯದಾದ ಆರ್ತನಲ್ಲಿ ಜಿಜ್ಞಾಸೆ, ಆರ್ತ ಮತ್ತು ಅರ್ಥಾಥಿರ್ ಎಂದು ಮೂರು ರೀತಿಗಳಿವೆ. ಪರಾಭಕ್ತಿ, ಸಾತ್ವಿಕವಾದದ್ದು, ಇದರಿಂದ ಕೂಡಿದವನು ಸರ್ವಶ್ರೇಷ್ಠ ಜ್ಞಾನವನ್ನು ಪಡೆಯುತ್ತಾನೆ. ಜೀವನ ಮೋಕ್ಷ ಸಾಧನೆಗೆ ಶ್ರವಣ, ಮನನ, ನಿಧಿಧ್ಯಾಸ, ದಾನ, ತಪಸ್ಸು ಇತ್ಯಾದಿ ಹಲವು ಮಾರ್ಗಗಳಿದ್ದಾಗ್ಯೂ "ಭಕ್ತಿ' ಮುಕ್ತಿಗೆ ಸುಲಭವಾದ ಸಾಧನ. ಹೀಗೆ ಮುಕ್ತಿ ಭಕ್ತಿಯ ದಾಸಿ ಎಂಬ ಅಭಿಪ್ರಾಯವಿದೆ.

"ಯದಿ ಭವತಿ ಮುಕುಂದೇ ಭಕ್ತಿರಾನಂದ ಸಾಂದ್ರಾ

ವಿಲುಠತಿ ಚರಣಾಜ್ವೀ ಮೋಕ್ಷ ಸಾಮ್ರಾಜ್ಯ ಲಃ'

ಅಂದರೆ ಉತ್ಕಟ ಭಕ್ತನ ಪಾದಾಬ್ಜದಡಿಯಲ್ಲಿ ಮುಕ್ತಿ ಕನ್ನಿಕೆ ಉರುಳಾಡುವಳು ಎಂದು ಭಕ್ತಿಯ ಹಿರಿಮೆಯನ್ನು ಎತ್ತಿಹಿಡಿಯಲಾಗಿದೆ. ಶ್ರೀಕೃಷ್ಣನಂತೂ "ಜ್ಞಾನಿತು ಆತ್ಮೈವ ಮೇಮತಂ' -ಜ್ಞಾನಿಯಾದ ಭಕ್ತನು ನಾನೇ ಎಂದು ತಿಳಿ ಎಂದಿದ್ದಾನೆ.

ಶ್ರೀಪಾದರಾಯರು "ಭಕ್ತಿ ಬೇಕು, ವಿರಕ್ತಿ ಬೇಕು ಸರ್ವಶಕ್ತಿ ಬೇಕು ಮುಂದೆ ಮುಕ್ತಿಯ ಬಯಸುವಗೆ ' ಎಂದು ಹಾಡಿದ್ದಾರೆ. ಪುರಂದರದಾಸರು- "ಮುಕ್ತಿ ಪಡುವುದಕೆ ಪುರಂದರ ವಿಠಲನ ಭಕ್ತನಾಗುವಂದೆ ಸಾ' ಎಂದೂ "ಭಕ್ತಿಯಲಿ ಪುರಂದರ ವಿಠಲನ ನೆನೆದರೆ ಮುಕ್ತಿ ಸಾಧನ' ಎಂದೂ ಹೇಳಿದ್ದಾರೆ. ಇದರಿಂದ ಭಕ್ತಿಯ ಪ್ರಾಮುಖ್ಯತೆ ಎಷ್ಟೆಂದು ಸ್ಪಷ್ಟವಾಗುತ್ತದೆ. ಪ್ರಹ್ಲಾದನು ನವವಿಧ ಭಕ್ತಿಗಳನ್ನು ಹೇಳಿದ್ದಾನೆ -"ಶ್ರವಣಂ ಕೀರ್ತನಂ ವಿಷ್ಣೋಃ ಸ್ಮರಣಂ ಪಾದಸೇವನಂ ಅರ್ಚನಂ ವಂದನಂ ದಾಸ್ಯಂ ಸಖ್ಯಂ ಆತ್ಮನಿವೇದನಂ ಇವುಗಳಲ್ಲಿ ಭಕ್ತಿಯು ವ್ಯಕ್ತವಾಗುವ ಎಲ್ಲ ಬಗೆಗಳನ್ನು ಹೇಳಿದ್ದರೂ, ಇವನ್ನೆಲ್ಲ ಪಂಚಭಾವಗಳಾದ ದಾಸ್ಯ, ಸಖ್ಯ, ಮಧುರ, ವಾತ್ಸಲ್ಯ, ಶಾಂತಿ ಕಲ್ಪನೆಯಿಂದಲೆ ಅನುಷ್ಠಾನಗೊಳಿಸಬೇಕು.

ಹರಿದಾಸ ಸಾಹಿತ್ಯವನ್ನು ಪರಿಶೀಲಿಸಿದಾಗ ಹರಿದಾಸರು ಸಗುಣವಾದಿಗಳೆಂದೇ ಹೇಳಬೇಕು. ಇದನ್ನೇ ವಿವಿಧ ದಾಸವರೇಣ್ಯರು ವಿಶದೀಕರಿಸಿದ ಪರಿ ಇಂತಿದೆ. ಅಗಣಿತಗುಣದವನು (ಗೋಪಾಲದಾಸ), ಉತ್ತುಂಗ ಗುಣಗಳ ಅಂತರಂಗನ (ಶ್ರೀಪಾದರಾಯರು), ನಿತ್ಯಗುಣಾರ್ಣವ ನಿಜಗುಣ ಪರಿಪೂರ್ಣ (ಪುರಂದರದಾಸ), ಬಹುಗುಣ ಭರಿತ -ಸದ್ಗುಣಭರಿತ (ಜಗನ್ನಾಥ ದಾಸ)- ಈ ಎಲ್ಲ ಗುಣಗಳಿಂದ ಕೂಡಿದ ಶ್ರೀಕೃಷ್ಣನನ್ನು ಕುರಿತು "ಕಾಕು ಮಾಡದಂತೆ ಎನ್ನನ್ನು ಸಲಹಯ್ಯ ಸಾಕಾರ ಶ್ರೀಕೃಷ್ಣನೇ ಎಂದಿದ್ದಾರೆ ವ್ಯಾಸರಾಯರು. ಇಂತಹವಲ್ಲದೆ "ಆಕಾರವಿದ್ದ ನಿರಾಕಾರ, ರೂಪಾಗಬಲ್ಲ ಅರೂಪಾ ಗಬಲ್ಲ ರೂಪ-ಅರೂಪ ಎರಡೊಂದಾಗಬಲ್ಲ, ಸಗುಣನಾಗಬಲ್ಲ ನಿರ್ಗುಣನಾಗಬಲ್ಲ, ಸಗುಣ-ನಿರ್ಗುಣ ಎರಡೊಂದಾಗಬಲ್ಲ' ಇತ್ಯಾದಿ ಮಾತುಗಳನ್ನು ಹರಿದಾಸ ಸಾಹಿತ್ಯದಲ್ಲಿ ಕಾಣುತ್ತೇವೆ.

ಮಹಿಪತಿರಾಯರು, ಸಾತ್ವಿಕರ ಭಕ್ತಿ ಜ್ಞಾನಯುಕ್ತ ಭಕ್ತಿ ಅವರ ಮನಸ್ಸಿನ ಚಂಚಲ ವೃತ್ತಿ ಹೋಗಿ ಅದಕ್ಕೆ ನಿಶ್ಚಲತ್ವ ಬಂದಿರುತ್ತದೆ. ಸತ್ಸಂಗ, ಸತ್ಕಥಾ ಶ್ರವಣ, ಸಚ್ಛಾಸ್ತ್ರ ಅಧ್ಯಯನಾದಿಗಳಿಂದ ಸಾತ್ವಿಕ ಭಕ್ತರು ಸಂಶಯ ರಹಿತರಾದರು. ಅದನ್ನೇ- "ಭಕ್ತಿರಸದೊಳು ಮುಣುಗಿ ಭಕ್ತಿಗೈದುವ ಗತಿಯ ಯುಕ್ತಿ ತಿಳಿದವನೆ ವೈಷ್ಣವನು ಹರಿ ಪರಂದೈವವೆಂದು ಹರಿಯ ಕೊಂಡಾಡುತಲಿ ಹರಿಯ ನೆನೆಯುವನೆ ವೈಷ್ಣವನು' ಎಂದಿದ್ದಾರೆ. ಪ್ರಸನ್ನ ವೆಂಕಟದಾಸರು- ಪರಮಾತ್ಮನ ಚಿಂತನೆಗೆ ಶುದ್ದಾಶುದ್ಧ ಸಮಯವೆಂಬುದಿಲ್ಲ. ಸರ್ವ ಕಾಲ ದಲ್ಲೂ ಸ್ಮರಣೆ ನಡೆಯುತ್ತಿರಬೇಕು.

ಯಾವಾತನ ಮನದಲ್ಲಿ ನಾರಾಯಣನ ನಾಮವಿದೆಯೋ ಅವನದು ಮಂಗಲವದನ. ಯಾರಲ್ಲಿ ಶ್ರೀ ಹರಿಯ ಕುರಿತು ಅಪಾರ ಶ್ರದ್ಧೆ ಇದೆಯೋ ಅದರ ಮುಂದೆ ಇತರ ಸಾಧನಗಳನ್ನು ಹರಹಿಕೊಳ್ಳುವುದು ನಿಷ್ರ್ಪಯೋಜಕ. ಅಪರೋಗಳೇ ಆದರೂ ಪ್ರಾರಬ್ಧದೇಹ ಇರುವತನಕ ಸಾಧ ನೋಪಾಯ ಉಳ್ಳವರಾಗಿಯೇ ಇರುತ್ತಾರೆ. ತತ್ವನಿಶ್ಚಯ ಉಳ್ಳ ಯುಕ್ತರಾದ ಯೋಗಿಗಳಿಗೆ ಭಕ್ತಿಯು ಸಾಧನೆಯೂ ಹೌದು. ಸಾಧ್ಯವೂ ಹೌದು. "ಯುಕ್ತರಾದ' ಭಕ್ತರ ಕೀರ್ತನ ಭಕ್ತಿಯ ವಿವರಣೆ ಯನ್ನು ಭಾಗವತದಲ್ಲಿ ಹೇಳುವ ಶ್ರವಣ ಕೀರ್ತನಾದಿ ನವವಿಧವೂ ಅದರಲ್ಲಿ ಸಮಾವೇಶ ಗೊಳ್ಳುತ್ತದೆ ಎಂದು ಬಣ್ಣಿಸುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net