ಅಂತರಾಷ್ಟ್ರೀಯ ಯೋಗ ದಿನಾಚರಣೆ

Published on


ದೆಹಲಿ:
ನವರತ್ನ ಉದ್ಯಮಗಳಲ್ಲಿ ಒಂದಾದ ನ್ಯಾಷನಲ್ ಬಿಲ್ಡಿಂಗ್ಸ್ ಕನ್ಸ್ಟ್ರಕ್ಷನ್ ಕಾರ್ಪೊರೇಷನ್ ಲಿಮಿಟೆಡ್, (ಎನ್‌ಬಿಸಿಸಿ)ಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸಡಗರದಿಂದ ಆಚರಣೆ ಮಾಡಲಾಯಿತು.
ನವದೆಹಲಿಯ ಕಾರ್ಪೊರೇಟ್ ಕಚೇರಿಯಲ್ಲಿ ಭಾರತೀಯ ಯೋಗಾ ಸಂಸ್ಥಾನ್ ಸಹಯೋಗದಲ್ಲಿ ನಡೆದ ಯೋಗಾ ದಿನಾಚರಣೆಯಲ್ಲಿ ಎನ್‌ಬಿಸಿಸಿ ಕಂಪನಿಯ ಸಿಎಂಡಿ ಕೆ.ಪಿ. ಮಹದೇವಸ್ವಾಮಿ, ನಿರ್ದೇಶಕ (ಹಣಕಾಸು) ಬಿ.ಕೆ. ಸೋಖೆ, ಹಿರಿಯ ಅಧಿಕಾರಿಗಳು ಮತ್ತು ಕಂಪನಿಯ ಉದ್ಯೋಗಿಗಳು ಭಾಗವಹಿಸಿ ವಿವಿಧ ಯೋಗಾಸನಗಳನ್ನು ಪ್ರದರ್ಶಿಸಿದರು.
ಪ್ರಜಾಪಿತ ಬ್ರಹ್ಮ ಕುಮಾರೀಸ್ ಈಶ್ವಯ್ಯ ಅವರ ಸಹಯೋಗದಲ್ಲಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಜೀವನದಲ್ಲಿ ಯೋಗ ಎಷ್ಟು ಮಹತ್ವದ್ದು ಎನ್ನುವುದನ್ನು ಕಾರ್ಯಾಗಾರದಲ್ಲಿ ತಿಳಿಸಿಕೊಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net