ಶಿಕ್ಷಕರಿಗೆ ಯೋಗ ಪ್ರಶಸ್ತಿ ಪ್ರದಾನ

Oplus_16908288
Published on

ಸೋಮವಾರಪೇಟೆ: ಕೊಡಗಿನ ಮೂವರು ಶಿಕ್ಷಕರಿಗೆ ರೋಟರಿ ಬೆಂಗಳೂರು ಗ್ಲೋಬಲ್ ಯೋಗ ಸಂಸ್ಥೆಯ ವತಿಯಿಂದ ಪ್ರಶಸ್ತಿ ನೀಡಿ ಇತ್ತೀಚೆಗೆ ಗೌರವಿಸಲಾಯಿತು.

ರೋಟರಿ ಕ್ಲಬ್ ಆಫ್ ಬೆಂಗಳೂರು ಕಲ್ಯಾಣ್‌ಗಿರಿ ಮತ್ತು ಯೋಗ ಯೂನಿವರ್ಸಿಟಿ ಆಫ್ ದಿ ಅಮೆರಿಕಾಸ್ ಸಹಭಾಗಿತ್ವದಲ್ಲಿ ಬೆಂಗಳೂರಿನ ಶ್ರೀ ಪುಟ್ಟಣ ಚೆಟ್ಟಿ ಟೌನ್ ಹಾಲ್‌ನಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಜಿಲ್ಲೆಯ ಮಡಿಕೇರಿಯ ಯೋಗ ಭಾರತಿಯ ಯೋಗ ಶಿಕ್ಷಕ ಮಹೇಶ್‌ಕುಮಾರ್ ಅವರಿಗೆ ಜೀವಮಾನದ ಸಾಧನೆಗಾಗಿ ಯೋಗ ಸಾಧಕ ಪ್ರಶಸ್ತಿ, ಸೋಮವಾರಪೇಟೆ ನಿರಂತರ ಯೋಗ ಕೇಂದ್ರದ ಶಿಕ್ಷಕ ಕಿಬ್ಬೆಟ್ಟ ಗಣೇಶ್ ಅವರಿಗೆ ಯೋಗ ರತ್ನ ಹಾಗೂ ಕುಶಾಲನಗರದ ಯೋಗ ಶಿಕ್ಷಕಿ ಕೆ.ಅಮಿತ ಸತೀಶ್ ಅವರಿಗೆ ಯೋಗ ಶ್ರೀ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

ಗೌರಿಗದ್ದೆ ಆಶ್ರಮದ ವಿನಯ್ ಗುರೂಜಿ, ಯೋಗ ಯೂನಿವರ್ಸಿಟಿ ಆಫ್ ದಿ ಅಮೆರಿಕಾಸ್‌ನ ಕುಲಪತಿ ವಿದ್ಯಾವಾಚಸ್ಪತಿ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ, ರೋಟರಿ ಜಿಲ್ಲಾ ಪ್ರಾಂತಪಾಲ ಎಲಿಜಬೆತ್ ಚೆರಿಯನ್, ರೋಟರಿ ಬೆಂಗಳೂರು ಗ್ಲೋಬಲ್ ಯೋಗ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಡಾ.ಯೋಗಿ ದೇವರಾಜ್, ಹೋಲಿಸ್ಟಿಕ್ ಹೆಲ್ತ್ ಕನ್ಸಲ್ಟಂಟ್ ನಿರ್ದೇಶಕ ದಕ್ಷಿಣಮೂರ್ತಿ ಸೇರಿದಂತೆ ಇತರ ಗಣ್ಯರು ಕಾರ್ಯಕ್ರಮದಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net