

ಭದ್ರಾವತಿ: ಭತ್ತವನ್ನು ಯಂತ್ರದ ಮೂಲಕ ನಾಟಿ ಮಾಡುವುದರಿಂದ ಖರ್ಚು ಕಡಿಮೆ ಹಾಗೂ ಹೆಚ್ಚು ಇಳುವರಿ ಬರುತ್ತದೆ ಎಂದು ಕೃಷಿ ಇಲಾಖೆ ಅಧಿಕಾರಿ ದಿವ್ಯಾ ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಹಾಗೂ ಕೃಷಿ ಇಲಾಖೆಯಿಂದ ಶುಕ್ರವಾರ ಕೂಡ್ಲಿಗೆರೆ ವಲಯ ವ್ಯಾಪ್ತಿಯ ಸಂಜೀವನಗರದಲ್ಲಿ ರೈತರಿಗೆ ಯಾಂತ್ರೀಕೃತ ಭತ್ತ ನಾಟಿ ಕುರಿತು ಮಾಹಿತಿ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ಸಮಯದ ಉಳಿತಾಯದ ಜತೆಗೆ ಕೂಲಿ ಕಾರ್ಮಿಕರ ಸಮಸ್ಯೆ ನಿವಾರಣೆಯಾಗುತ್ತದೆ. ರೈತರು ಯಾಂತ್ರೀಕೃತ ಭತ್ತ ನಾಟಿಗೆ ಮುಂದಾಗಬೇಕು ಎಂದರು. ಯೋಜನಾಧಿಕಾರಿ ಅಜಯ್‌ಕುಮಾರ್, ಜಿಲ್ಲಾ ಜನಜಾಗೃತಿ ವೇದಿಕೆಯ ಪಾರ್ವತಮ್ಮ, ದೇವೇಂದ್ರಪ್ಪ, ರೂಪಾ, ಮರಿಕಂಠಪ್ಪ, ಸುನಿಲ್‌ಕುಮಾರ್, ಸೋನಾಕ್ಷಿ ಇತರರಿದ್ದರು.