ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ದಂಗೆ ಎದ್ದಿದ್ದಾತ ವಿಮಾನ ಅಪಘಾತದಲ್ಲಿ ನಿಧನ!

Yevgeny Prigozhin
Published on

ನವದೆಹಲಿ: ರಷ್ಯಾದ ಖಾಸಗಿ ಭದ್ರತಾ ಕಂಪನಿ ವ್ಯಾಗ್ನರ್ ಮುಖ್ಯಸ್ಥ ಯೆವ್ಗೆನಿ ಪ್ರಿಗೋಜಿನ್ ಅವರು ವಿಮಾನ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ ಎನ್ನಲಾಗಿದೆ. ಈ ಕುರಿತು ರಷ್ಯಾದ ಸರ್ಕಾರಿ ಮಾಧ್ಯಮ ಬುಧವಾರ ವರದಿ ಮಾಡಿದೆ.

ರಷ್ಯಾದ ಸುದ್ದಿ ಸಂಸ್ಥೆ TASS ಪ್ರಕಾರ, ಬಿಜಿನೆಸ್​ ಜೆಟ್ ವಿಮಾನವು ಮಾಸ್ಕೋದ ವಾಯುವ್ಯಕ್ಕೆ ಪತನಗೊಂಡಿದ್ದು, ಅದರಲ್ಲಿದ್ದ ಎಲ್ಲ 10 ಮಂದಿ ಸಾವಿಗೀಡಾಗಿದ್ದಾರೆ. ಹಾಗೆ ಮೃತಪಟ್ಟ ಪ್ರಯಾಣಿಕರ ಪಟ್ಟಿಯಲ್ಲಿ ಪ್ರಿಗೋಜಿನ್ ಅವರ ಹೆಸರೂ ಇದೆ.

ಹಿಂದೊಮ್ಮೆ ರಷ್ಯಾದ ಅಧ್ಯಕ್ಷ ವ್ಲಾಡಿಮರ್ ಪುಟಿನ್​ಗೆ ಆಪ್ತರಾಗಿದ್ದ 62 ವರ್ಷದ ಅರೆಸೈನಿಕ ನಾಯಕ ಪ್ರಿಗೊಜಿನ್, ತಮ್ಮ ದೇಶದ ಉನ್ನತ ಅಧಿಕಾರಿಗಳನ್ನು ಟೀಕಿಸುತ್ತ ಕೊನೆಗೆ ಜೂನ್ ಅಂತ್ಯದಲ್ಲಿ ರಷ್ಯಾ ಸರ್ಕಾರದ ವಿರುದ್ಧ ಅಲ್ಪಾವಧಿಯ ದಂಗೆ ನಡೆಸಿದರು. ನಿರ್ದಿಷ್ಟವಾಗಿ ಹಿಂಸಾತ್ಮಕ ಯುದ್ಧಭೂಮಿ ತಂತ್ರಗಳಿಗೆ ಹೆಸರುವಾಸಿಯಾದ ಆತನ ಪಡೆಗಳು ಉಕ್ರೇನಿಯನ್ ಫ್ರಂಟ್​ನಲ್ಲಿ ರಷ್ಯಾಕ್ಕಾಗಿ ಹಲವಾರು ಯುದ್ಧಗಳನ್ನು ಮುನ್ನಡೆಸಿದ್ದವು.

ದಂಗೆ ಸ್ಥಗಿತಗೊಂಡ ಬಳಿಕ ಪ್ರಿಗೋಜಿನ್​ ಮತ್ತು ಪುಟಿನ್ ನಡುವೆ ಸ್ಪಷ್ಟ ಒಪ್ಪಂದ ನಡೆದಿದ್ದು, ಪ್ರಿಗೋಜಿನ್​​ ಮತ್ತು ಅವರ ಪಡೆಗಳು ಬೆಲಾರಸ್‌ಗೆ ಸ್ಥಳಾಂತರಗೊಳ್ಳುವ ಉದ್ದೇಶದಿಂದ ಎನ್ನಲಾಗಿತ್ತು. ಪ್ರಿಗೋಜಿನ್​ ಸ್ವತಃ ರಷ್ಯಾವನ್ನು ಉತ್ತಮ ರೀತಿಯಲ್ಲಿ ತೊರೆಯುವುದಾಗಿ ಪ್ರತಿಜ್ಞೆ ಮಾಡಿದ್ದ. ಅಷ್ಟರಲ್ಲಾಗಲೇ ಈ ಅಪಘಾತ ಸಂಭವಿಸಿ ಮೃತಪಟ್ಟಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net