ನಿನ್ನೆಯಷ್ಟೇ ನಿಶ್ಚಿತಾರ್ಥವಾಗಿದ್ದ ಯುವತಿ ಹಾಡಹಗಲೇ ಕಿಡ್ನಾಪ್: ಸ್ಥಳೀಯರಲ್ಲಿ ಹೆಚ್ಚಾದ ಆತಂಕ

Engagement
Published on

ಹೈದರಾಬಾದ್​: ನಿನ್ನೆಯಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವತಿಯನ್ನು ಹಾಡಹಗಲೇ ದುಷ್ಕರ್ಮಿಗಳು ಅಪಹರಿಸಿರುವ ಘಟನೆ ತೆಲಂಗಾಣದ ರಾಜಣ್ಣ ಸಿರ್ಸಿಲ್ಲ ಜಿಲ್ಲೆಯ ಚಂದುರ್ಥಿ ಮಂಡಲದ ಮೂಡಪಲ್ಲಿಯಲ್ಲಿ ನಡೆದಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ.

ಯುವತಿ ಶಾಲಿನಿ ಮತ್ತು ಆಕೆಯ ತಂದೆ ಚಂದ್ರಯ್ಯ ಇಬ್ಬರು ಹನುಮಂತನ ದೇವಸ್ಥಾನಕ್ಕೆ ಹೋಗಿದ್ದರು. ದೇವರ ದರ್ಶನ ಮುಗಿಸಿ ಬರುವಾಗ ಅಲ್ಲಿಯೇ ಇದ್ದ ನಾಲ್ವರು ಚಂದ್ರಯ್ಯನ ಮೇಲೆ ಹಲ್ಲೆ ಮಾಡಿ, ಶಾಲಿನಿಯನ್ನು ಕಾರಿನೊಳಗೆ ಎಳೆದುಕೊಂಡು ಅಪಹರಿಸಿದ್ದಾರೆ. ನಾಲ್ವರು ಕೂಡ ಪಾನಮತ್ತರಾಗಿದ್ದರು. ಇಡೀ ದೃಶ್ಯ ದೇವಸ್ಥಾನದ ಆವರಣದಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಅಪಹರಣಕ್ಕೆ ಒಳಗಾದ ಯುವತಿ, ಅಪ್ರಾಪ್ತೆ ಆಗಿದ್ದ ಸಂದರ್ಭದಲ್ಲಿ ಯುವಕನೊಬ್ಬನಿಂದ ಪ್ರೀತಿಯ ಹೆಸರಲ್ಲಿ ದೌರ್ಜನ್ಯಕ್ಕೆ ಒಳಗಾಗಿದ್ದಳು. ಈ ಸಂಬಂಧ ದೂರು ದಾಖಲಾದ ಬಳಿಕ ಆರೋಪಿಯನ್ನು ಪೋಕ್ಸೊ ಕಾಯ್ದೆ ಅಡಿ ಬಂಧಿಸಲಾಗಿತ್ತು. ಇತ್ತೀಚೆಗಷ್ಟೇ ಆತ ಜೈಲಿನಿಂದ ಬಿಡುಗಡೆಯಾಗಿದ್ದಾನೆ. ನಿನ್ನೆಯಷ್ಟೇ ಶಾಲಿನಿ ನಿಶ್ಚಿತಾರ್ಥ ಬೇರೆ ಯುವಕನೊಂದಿಗೆ ನಡೆದಿತ್ತು. ಆದರೆ, ಇಂದು ಆಕೆಯ ಅಪಹರಣವಾಗಿದೆ.

ಜೈಲಿನಿಂದ ಬಿಡುಗಡೆಯಾಗಿದ್ದ ಜ್ಜನೇಶ್ವರ್ ಅಲಿಯಾಸ್ ಜಾವು ಅಪಹರಣದಲ್ಲಿ ಭಾಗಿಯಾಗಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದು, ಎರಡು ತಂಡಗಳನ್ನು ರಚಿಸಿ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net