ವಾರ್ಷಿಕ ಪದವಿ ಪ್ರದಾನ ಸಮಾರಂಭದಲ್ಲಿ ’ಕೂ’ ಸಂಸ್ಥಾಪಕರ ಸ್ಫೂರ್ತಿ ಮಾತು

Published on

ಬೆಂಗಳೂರು
ನಾನು ಬರಿಗೈಯಲ್ಲಿ ಆರಂಭಿಸಿದೆ ಮತ್ತು ಅಲ್ಲಿಂದಲೇ ಜಾದೂ ಆಯಿತು, ನೀವು ಅಪಾಯವನ್ನು ಎದುರಿಸಿದಾಗ ಮತ್ತು ಅನಿಶ್ಚಿತತೆಯನ್ನು ಅಪ್ಪಿಕೊಂಡಾಗ ಅದು ಸಾಧ್ಯವಾಗುತ್ತದೆ. -ಹೀಗೆ ಹೇಳಿದವರು ಕೂ (ಓಟಟ) ಮತ್ತು ಟ್ಯಾಕ್ಸಿಫಾರ್ ಕ್ಯೂರ್ ಸಂಸ್ಥಾಪಕರಾದ ರಾಧಾಕೃಷ್ಣ ಅವರು.
ರಾಮಯ್ಯ ಇನ್ಸ್‌ಸ್ಟಿಟ್ಯೂಟ್ ಆ್ ಮ್ಯಾನೇಜ್ಮೆಂಟ್‌ನ 28ನೇ ವಾರ್ಷಿಕ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ರಾಧಾಕೃಷ್ಣ ಅವರ ಸ್ಪೂರ್ತಿಯುತವಾದ ಮಾತುಗಳು ಭವಿಷ್ಯದ ಯಶಸ್ವಿಗಾಗಿ ತಾವು ಅಳವಡಿಸಿಕೊಳ್ಳಬೇಕಾದ ಗುಣಗಳಾದ ಪರಿಶ್ರಮ ಹಾಗೂ ದಿಟ್ಟತನದ ಗುಣಗಳ ಮೌಲ್ಯವನ್ನು ನೆನಪಿಸಿತು.
ಗೋಕುಲ ಎಜುಕೇಷನ್ ಫೌಂಡೇಷನ್ ಮುಖ್ಯ ಶೈಕ್ಷಣಿಕ ಸಲಹೆಗಾರರಾದ ಡಾ.ಕರಿಸಿದ್ದಪ್ಪ ಅಧ್ಯಕ್ಷತೆ ವಹಿಸಿದ್ದರು. ಗೋಕುಲ ಎಜುಕೇಷನ್ ಫೌಂಡೇಷನ್ ಮುಖ್ಯಾಧಿಕಾರಿ ಡಾ.ಎಚ್.ವಿ.ಪಾರ್ಶ್ವನಾಥ್, ಜಿಇಎ್ ನಿರ್ದೇಶಕರಾದ ಡಾ.ಎ.ಎಚ್.ರಾಜಾಸಾಬ್, ರಾಮಯ್ಯ ಇನ್ಸ್‌ಸ್ಟಿಟ್ಯೂಟ್ ಆ್ ಮ್ಯಾನೇಜ್ಮೆಂಟ್ ನಿರ್ದೇಶಕರಾದ ಡಾ.ಮಾನಸಾ ನಾಗಭೂಷಣಂ, ರಿಜಿಸ್ಟ್ರಾರ್ ಡಾ.ಸವಿತಾ ರಾಣಿ ರಾಮಚಂದ್ರನ್ ಹಾಜರಿದ್ದರು.
ಸ್ಥಾಪಕ ಅಧ್ಯಕ್ಷರಾದಂಥ ದಿ.ಡಾ.ಎಂ.ಎಸ್.ರಾಮಯ್ಯ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಷನೆ ಮಾಡಿದರು. ವಿದ್ಯಾರ್ಥಿಗಳು ಪದವಿ ಪ್ರಮಾಣ ಸ್ವೀಕರಿಸುವುದರ ನಿರ್ವಹಣೆಯನ್ನು ಡಾ.ಮಾನಸಾ ನಾಗಭೂಷಣಮ್ ಅವರು ಮಾಡಿದರು. ಆ ನಂತರದಲ್ಲಿ ಅತಿಹೆಚ್ಚು ಅಂಕ ಪಡೆದಂಥವರಿಗೆ ಪದಕಗಳ ವಿತರಣೆ ಮಾಡಲಾಯಿತು. ಶೈಕ್ಷಣಿಕ ಸಾಧನೆಗಾಗಿ ಏಳು ಬೆಳ್ಳಿ ಪದಕಗಳನ್ನು ನೀಡಲಾಯಿತು. ಚಿನ್ನದ ಪದಕವನ್ನು ಮನೀಶಾ ಎ. ಗೌಡ ಅವರ ಅತ್ಯುತ್ತಮ ಸಾಧನೆಗಾಗಿ ನೀಡಲಾಯಿತು.
ಪದವಿ ಪ್ರದಾನ ಸಮಾರಂಭದಲ್ಲಿ 292 ವಿದ್ಯಾರ್ಥಿಗಳು ಮ್ಯಾನೇಜ್ಮೆಂಟ್ ಸ್ನಾತಕೋತ್ತರ ಡಿಪ್ಲೊಮಾ (ಪಿಜಿಡಿಎಂ) ಪದವಿಯನ್ನು ಪಡೆದುಕೊಂಡರು. ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು. ಡಾ.ಸವಿತಾರಾಣಿ ರಾಮಚಂದ್ರನ್ ವಂದನಾರ್ಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net