

ಒಲಿಂಪಿಕ್ಸ್ಗೆ ಭರ್ಜರಿ ಸಿದ್ಧತೆ
ಸಿಂಧುಗೆ ವಿಶ್ವ ಕಿರೀಟ
ಮುಗಿಯದ ವಿವಾದ ಪರ್ವ
ಈ ವರ್ಷವೂ ವಿವಾದಗಳಿಂದ ಕ್ರೀಡೆ ಹೊರತಾಗಿರಲಿಲ್ಲ. ವರ್ಷದ ಆರಂಭದಲ್ಲಿ ಕೆಎಲ್ ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯ ‘ಕಾಫಿ ವಿತ್ ಕರಣ್ ಶೋ’ನಲ್ಲಿ ಅಶ್ಲೀಲವಾಗಿ ಮಾತನಾಡಿದ್ದಾರೆ ಎನ್ನುವ ಕಾರಣಕ್ಕೆ ದೊಡ್ಡ ಮಟ್ಟದ ವಿವಾದ ಸೃಷ್ಟಿಯಾಗಿತ್ತು. ಕಿವೀಸ್ ಪ್ರವಾಸದಿಂದ ಅರ್ಧದಲ್ಲಿಯೇ ಇವರು ತವರಿಗೆ ವಾಪಸಾದರೆ, ವರ್ಷದ ಕೊನೆಯಲ್ಲಿ ಟಿಎನ್ಪಿಎಲ್, ಕೆಪಿಎಲ್ ಹಾಗೂ ಮುಂಬೈ ಟಿ20 ಲೀಗ್ನಲ್ಲಿ ಫಿಕ್ಸಿಂಗ್ನ ಆರೋಪಗಳು ಎದುರಾಗಿದ್ದರಿಂದ ಕ್ರಿಕೆಟ್ ಮತ್ತೆ ತಲೆತಗ್ಗಿಸಿತು. ಡೇವಿಸ್ ಕಪ್ ಪಂದ್ಯದ ಬಗ್ಗೆ ಭಾರತ ಹಾಗೂ ಪಾಕಿಸ್ತಾನಗಳ ನಡುವಿನ ಆತಿಥ್ಯ ಗೊಂದಲದ ಬಳಿಕ ಪಂದ್ಯವನ್ನು ಐಟಿಎಫ್ ತಟಸ್ಥ ಸ್ಥಳಕ್ಕೆ ವರ್ಗಾವಣೆ ಮಾಡಿ ಆಡಿಸಿತು.
ವಿವಾದಿತ ವಿಶ್ವಕಪ್ ಫೈನಲ್, ಆಂಗ್ಲರಿಗೆ ವಿಶ್ವ ಕಿರೀಟ
ಇಂಗ್ಲೆಂಡ್ ಆತಿಥ್ಯದಲ್ಲಿ ಮೇ 30ರಿಂದ ಜೂನ್ 14ರವರೆಗೆ ನಡೆದ ಏಕದಿನ ವಿಶ್ವಕಪ್ ಈ ವರ್ಷದ ಪ್ರಮುಖ ಟೂರ್ನಿ ಆಗಿತ್ತು. ವಿವಾದಾತ್ಮಕ ಫೈನಲ್ನಲ್ಲಿ ಆತಿಥೇಯ ಇಂಗ್ಲೆಂಡ್ ಚಾಂಪಿಯನ್ ಪಟ್ಟವೇರಿತು. ಜೂನ್ 14ರಂದು ಲಾರ್ಡ್ಸ್ನಲ್ಲಿ ನಡೆದ ನ್ಯೂಜಿಲೆಂಡ್-ಇಂಗ್ಲೆಂಡ್ ನಡುವಿನ ಫೈನಲ್ ನಾಟಕೀಯ ಕ್ಷಣಗಳಿಗೆ ಸಾಕ್ಷಿಯಾಯಿತು. ಟೈ ಆದ ಮೊದಲ ವಿಶ್ವಕಪ್ ಫೈನಲ್ ಇದಾಯಿತು. ಸೂಪರ್ ಓವರ್ನಲ್ಲೂ ಪಂದ್ಯ ಟೈ ಕಂಡಿದ್ದರಿಂದ ಅಂಪೈರ್ಗಳ ಪ್ರಮಾದ ಹಾಗೂ ಬೌಂಡರಿ ಕೌಂಟ್ ಎನ್ನುವ ವಿವಾದಿತ ನಿಯಮದಿಂದ ಇಂಗ್ಲೆಂಡ್ ಚಾಂಪಿಯನ್ ಪಟ್ಟವೇರಿತು. ಬೆನ್ ಸ್ಟೋಕ್ಸ್ ಆಟ ಗಮನಸೆಳೆಯಿತು.
ವಿದಾಯ ಹೇಳಿದ ಯುವರಾಜ್ ಸಿಂಗ್
2011ರ ವಿಶ್ವಕಪ್ ವಿಜಯದ ಹೀರೋ ಯುವರಾಜ್ ಸಿಂಗ್, ದಕ್ಷಿಣ ಆಫ್ರಿಕಾ ಕ್ರಿಕೆಟ್ನ ಮಧ್ಯಮ ಕ್ರಮಾಂಕದ ಆಧಾರ ಸ್ತಂಭ ಹಾಶಿಂ ಆಮ್ಲ ಈ ವರ್ಷ ಕ್ರಿಕೆಟ್ಗೆ ವಿದಾಯ ಪ್ರಕಟಿಸಿದ ಪ್ರಮುಖರು. ವಿಶ್ವ ಕ್ರೀಡಾರಂಗದಲ್ಲಿ ಖ್ಯಾತ ಮಹಿಳಾ ಬಾಕ್ಸರ್ ನಿಕೋಲ್ ಆಡಮ್್ಸ, ಷಟ್ಲರ್ ಲೀ ಚಾಂಗ್ ವೀ ನಿವೃತ್ತಿ ಹೇಳಿದರು.
ದಕ್ಷಿಣ ಏಷ್ಯಾ ಗೇಮ್ಸ್ನಲ್ಲಿ ಮಿಂಚಿದ ಭಾರತ
ನೇಪಾಳದಲ್ಲಿ ನಡೆದ 13ನೇ ಆವೃತ್ತಿಯ ದಕ್ಷಿಣ ಏಷ್ಯಾ ಗೇಮ್ಸ್ನಲ್ಲಿ ಭಾರತ ಪಾರಮ್ಯ ಮೆರೆಯಿತು. 174 ಚಿನ್ನ, 93 ಬೆಳ್ಳಿ ಹಾಗೂ 45 ಕಂಚಿನೊಂದಿಗೆ ದಾಖಲೆಯ 312 ಪದಕವನ್ನು ಭಾರತ ಗೆದ್ದುಕೊಂಡಿತು.
ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಪ್ರಾಬಲ್ಯ
ವಿಶ್ವಕಪ್ನ ಉತ್ತಮ ನಿರ್ವಹಣೆ ನಡುವೆಯೂ ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್ನಲ್ಲಿ ಸೋಲು ಕಂಡು ತಂಡ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತೆರಳಿತ್ತು. ಇಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನ ಮೊದಲ ಸರಣಿ ಆಡಿದ್ದ ಭಾರತ ಟೆಸ್ಟ್ ಸರಣಿಯನ್ನು 2-0, ಏಕದಿನ ಸರಣಿಯನ್ನು 2-0 ಹಾಗೂ ಟಿ20 ಸರಣಿಯನ್ನು 3-0ಯಿಂದ ಜಯಿಸಿತು. ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧ ತವರಿನ ಟೆಸ್ಟ್ ಸರಣಿಯನ್ನು 3-0ಯಿಂದ ಗೆಲ್ಲುವ ಮೂಲಕ ಇದೇ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾ ವಿರುದ್ಧ ಕ್ಲೀನ್ಸ್ವೀಪ್ ಸಾಧನೆಯನ್ನು ಮಾಡಿದರೆ, ಟಿ20 ಸರಣಿ 1-1 ರಿಂದ ಸಮಬಲ ಕಂಡಿತು.
ಬಾಂಗ್ಲಾದೇಶ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯನ್ನು 2-0ಯಿಂದ ಟಿ20 ಸರಣಿಯನ್ನು 2-1ರಿಂದ ಗೆದ್ದಿತು. ವರ್ಷದ ಕೊನೆಯಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯನ್ನು 2-1 ಹಾಗೂ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿತು. ಈ ನಡುವೆ ರವಿಶಾಸ್ತ್ರಿ 2021ರವರೆಗೆ ಕೋಚ್ ಆಗಿ ಮರುನೇಮಕಗೊಂಡರು.
ವಿವಿಧ ಕ್ರೀಡಾ ಲೀಗ್ಗಳಲ್ಲಿ ಕರ್ನಾಟಕದ ಅಧಿಪತ್ಯ
ಕ್ರೀಡಾ ಲೀಗ್ಗಳಲ್ಲಿ ಕರ್ನಾಟಕದ ಫ್ರಾಂಚೈಸಿಗಳು ಅಧಿಪತ್ಯ ಸಾಧಿಸಿದವು. ವರ್ಷದ ಆರಂಭದಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್ನಲ್ಲಿ ಬೆಂಗಳೂರು ಬುಲ್ಸ್ ಚಾಂಪಿಯನ್ ಆದರೆ, ಅಕ್ಟೋಬರ್ನಲ್ಲಿ ಮುಕ್ತಾಯವಾದ 7ನೇ ಆವೃತ್ತಿಯಲ್ಲಿ ಪ್ರಶಸ್ತಿ ಉಳಿಸಿಕೊಳ್ಳಲು ವಿಫಲವಾಯಿತು. ಐಎಸ್ಎಲ್ ಫುಟ್ಬಾಲ್ನಲ್ಲಿ ಬೆಂಗಳೂರು ಎಫ್ಸಿ ಹಾಗೂ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ನಲ್ಲಿ ಬೆಂಗಳೂರು ರ್ಯಾಪ್ಟರ್ಸ್ ಚಾಂಪಿಯನ್ ಆಯಿತು. ಐಪಿಎಲ್ನಲ್ಲಿ ಆರ್ಸಿಬಿ ಕೊನೇ ಸ್ಥಾನ ಪಡೆದು ನಿರಾಸೆ ಮೂಡಿಸಿದರೆ, ಮುಂಬೈ ಇಂಡಿಯನ್ಸ್ 4ನೇ ಬಾರಿಗೆ ಪ್ರಶಸ್ತಿ ಜಯಿಸಿತು. ಚೊಚ್ಚಲ ಆವೃತ್ತಿಯ ಪ್ರೊ ವಾಲಿಬಾಲ್ ಲೀಗ್ನಲ್ಲಿ ಚೆನ್ನೈ ಸ್ಪಾರ್ಟನ್ಸ್ ತಂಡ ಪ್ರಶಸ್ತಿ ಗೆದ್ದಿತು. ಐ-ಲೀಗ್ ಫುಟ್ಬಾಲ್ ಚೆನ್ನೈ ಸಿಟಿ ಎಫ್ಸಿ ಪ್ರಶಸ್ತಿ ಗೆದ್ದಿತು. ಕೆಪಿಎಲ್ನಲ್ಲಿ ಹುಬ್ಬಳ್ಳಿ ಟೈಗರ್ಸ್ ಚಾಂಪಿಯನ್ ಆಯಿತು.
ದೇಶೀಯ ಕ್ರಿಕೆಟ್ನಲ್ಲೂ ಕರ್ನಾಟಕ ಪಾರಮ್ಯ
ಲೀಗ್ಗಳಲ್ಲಿ ಮಾತ್ರವಲ್ಲದೆ, ದೇಶೀಯ ಕ್ರಿಕೆಟ್ನಲ್ಲೂ ಕರ್ನಾಟಕ ಪಾರಮ್ಯ ಮೆರೆಯಿತು. ವರ್ಷದ ಆರಂಭದಲ್ಲಿ ನಡೆದ ಸಯ್ಯದ್ ಮುಷ್ತಾಕ್ ಅಲಿ ಟಿ20ಯಲ್ಲಿ ಟ್ರೋಫಿ ಗೆದ್ದಿದ್ದ ಕರ್ನಾಟಕ, ವರ್ಷದ ಕೊನೆಯಲ್ಲಿ ತಮಿಳುನಾಡು ತಂಡವನ್ನು ಮಣಿಸಿ ಅದನ್ನು ಉಳಿಸಿಕೊಳ್ಳಲು ಯಶ ಕಂಡಿತು. ಅದರೊಂದಿಗೆ ವಿಜಯ್ ಹಜಾರೆ ಟ್ರೋಫಿಯಲ್ಲೂ ತಮಿಳುನಾಡು ತಂಡವನ್ನು ಮಣಿಸಿ ಟ್ರೋಫಿ ಜಯಿಸಿತು.
ಬಿಸಿಸಿಐನಲ್ಲಿ ದಾದಾಗಿರಿ
ಹಾಕಿಯಲ್ಲಿ ಒಲಿಂಪಿಕ್ ಅರ್ಹತೆ
ವರ್ಷದ ಆರಂಭದಲ್ಲಿ ಸುಲ್ತಾನ್ ಅಜ್ಲಾನ್ ಷಾ ಹಾಕಿಯಲ್ಲಿ ರನ್ನರ್ಅಪ್ ಆಗಿದ್ದ ಪುರುಷರ ತಂಡ, ಆಸ್ಟ್ರೇಲಿಯಾ ಪ್ರವಾಸದಲ್ಲಿ ಹೀನಾಯ ಸೋಲು ಕಂಡಿತು. ಭುವನೇಶ್ವರದಲ್ಲಿ ನಡೆದ ಎಫ್ಐಎಚ್ ಸಿರೀಸ್ ಫೈನಲ್ಸ್ನಲ್ಲಿ ಕೊರಿಯಾ ತಂಡವನ್ನು 5-1ರಿಂದ ಮಣಿಸಿ, ಅಜ್ಲಾನ್ ಷಾ ಸೋಲಿಗೆ ಸೇಡು ತೀರಿಸಿಕೊಂಡಿತು. ಒಲಿಂಪಿಕ್ಸ್ ಪರೀಕ್ಷಾರ್ಥ ಟೂರ್ನಿಯ ಫೈನಲ್ನಲ್ಲಿ ಆತಿಥೇಯ ಜಪಾನ್ ತಂಡವನ್ನು 2-1ರಿಂದ ಮಣಿಸಿದರೆ, ಒಲಿಂಪಿಕ್ ಹಾಕಿ ಅರ್ಹತಾ ಹಂತದಲ್ಲಿ ರಷ್ಯಾವನ್ನು ಮಣಿಸಿ ಟೋಕಿಯೊ ಟಿಕೆಟ್ ಗಿಟ್ಟಿಸಿಕೊಂಡಿತು. ಮಹಿಳಾ ತಂಡ ಕೂಡ ಒಲಿಂಪಿಕ್ ಪರೀಕ್ಷಾರ್ಥ ಟೂರ್ನಿಯಲ್ಲಿ ಆತಿಥೇಯ ಜಪಾನ್ ತಂಡವನ್ನು 3-1ರಿಂದ ಮಣಿಸಿ ಚಾಂಪಿಯನ್ ಆಯಿತು. ಒಲಿಂಪಿಕ್ಸ್ ಹಾಕಿ ಅರ್ಹತಾ ಹಂತದಲ್ಲಿ ಅಮೆರಿಕವನ್ನು ಮಣಿಸಿ ಒಲಿಂಪಿಕ್ ಅರ್ಹತೆ ಪಡೆಯಿತು.
ಪಿಂಕ್ ಟೆಸ್ಟ್ ಯಶಸ್ಸು
ಗಂಗೂಲಿ ಒಲವಿನಂತೆ ಭಾರತ ತಂಡ ಕೊನೆಗೂ ಅಹರ್ನಿಶಿ ಟೆಸ್ಟ್ಗೆ ಪದಾರ್ಪಣೆ ಮಾಡಿತು. ಕೋಲ್ಕತದಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಐತಿಹಾಸಿಕ ಪಿಂಕ್ ಟೆಸ್ಟ್ಗೆ ಗಣ್ಯರ ದಂಡೇ ಸೇರಿತ್ತು. ಪ್ರೇಕ್ಷಕರ ಭರ್ಜರಿ ಸ್ಪಂದನೆಯಿಂದ ಅದ್ಭುತ ಯಶ ಕಂಡ ಪಂದ್ಯದಲ್ಲಿ ಭಾರತ ಮೂರೇ ದಿನಗಳಲ್ಲಿ ಜಯಿಸಿತು.