ಸಂವಿಧಾನ ವಿರೋಧಿ ಕಾಂಗ್ರೆಸ್ ತಕ್ಷಣವೇ ಜಮೀರ್ ಹೇಳಿಕೆಯನ್ನು ವಾಪಾಸ್ ಪಡೆಯಬೇಕು: ಯತ್ನಾಳ್​

Untitled design - 2024-06-25T155803.574
Published on

ಬೆಂಗಳೂರು: ಕಾಂಗ್ರೆಸ್ ವಿರುದ್ಧ ಗುಡುಗಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನಿನ್ನೆ ರಾಹುಲ್ ಗಾಂಧಿ ಅವರು ಸಂವಿಧಾನದ ಪ್ರತಿಯನ್ನು ಹಿಡಿದು, ದೇಶದಲ್ಲಿ ಸಂವಿಧಾನ ಅಪಾಯದಲ್ಲಿದೆ ಎಂದು ಹೇಳುತ್ತಿದ್ದರು. ಆದರೆ, ಇಂದು ಅವರದ್ದೇ ಪಕ್ಷದವರಾದ ಹಾಗೂ ಕರ್ನಾಟಕ ವಕ್ಫ್ ಖಾತೆ ಸಚಿವರಾದ ಜಮೀರ್ ಅಹ್ಮದ್, ಅರಣ್ಯ ಭೂಮಿಯನ್ನು ವಕ್ಫ್​ಗೆ ವರ್ಗಾಯಿಸಿಕೊಂಡು ಅಲ್ಲಿ ಬೇಕಾದ ವ್ಯವಸ್ಥೆಯನ್ನು ಕಲ್ಪಿಸಿಕೊಡುತ್ತೇವೆ ಎಂದು ಹೇಳುತ್ತಾರೆ.

"ಇಷ್ಟಕ್ಕೆ ನಿಲ್ಲಿಸದೆ, ನಮ್ಮ ಅರಣ್ಯ ಖಾತೆ ಸಚಿವರಾದ ಈಶ್ವರ್ ಖಂಡ್ರೆ ಮಗ ಸಾಗರ್ ಖಂಡ್ರೆ ಚುನಾವಣೆಯಲ್ಲಿ ಗೆದ್ದಿರುವುದು ನಮ್ಮ ಮುಸಲ್ಮಾನರ ಮತದಿಂದಲೇ ಆಗಿರುವುದರಿಂದ ಅವರು ಮಾಡಲೇ ಕೊಡಬೇಕು ಅಂತ ಹೇಳಿದ್ದಾರೆ. ಅಸಲಿಗೆ, ಸಂವಿಧಾನ ಅಪಾಯದಲ್ಲಿರುವುದು ನಿಮ್ಮ ಕಾಂಗ್ರೆಸ್ ಪಕ್ಷದ ಒಡೆದಾಡುವ ನೀತಿಯಂದಲೇ ಹೊರತು ಬೇರೆಯವರಿಂದಲ್ಲ" ಎಂದು ಸಚಿವರ ವಿರುದ್ಧ ಗುಡುಗಿದರು.

"ವಕ್ಫ್ ಸಚಿವರು ಸಾರ್ವಜನಿಕವಾಗಿ ಅರಣ್ಯ ಭೂಮಿಯನ್ನು ವಕ್ಫ್​ಗೆ ಬಳಸುತ್ತೇವೆ ಹಾಗೂ ಅದನ್ನು ಅಧಿಕೃತವಾಗಿ ವರ್ಗಾಯಿಸಿಕೊಳ್ಳುತ್ತೇವೆ ಎಂದು ಹೇಳುತ್ತಾರೆ. ಅರಣ್ಯ ಸಂಪತ್ತನ್ನು ಲೂಟಿ ಹೊಡೆಯಲು ಹೊರಟಿರುವ ವಕ್ಫ್ ಮಂಡಳಿಗೆ ಹಾಗೂ ವಕ್ಫ್ ಸಚಿವರಿಗೆ ಧಿಕ್ಕಾರವಿರಲಿ. ಇವರ ನಕಲಿ ಜಾತ್ಯಾತೀತೆಯನ್ನು ಜನರು ನೋಡಿದ್ದರೆ, ಅರ್ಥೈಸಿಕೊಂಡಿದ್ದಾರೆ. ಸಂವಿಧಾನ ವಿರೋಧಿ ಕಾಂಗ್ರೆಸ್ ಕೂಡಲೇ ಜಮೀರ್ ಹೇಳಿಕೆಯನ್ನು ವಾಪಾಸ್ ಪಡೆಯಬೇಕು. ಈಗಾಗಲೇ, ವಕ್ಫ್​ಗೆ ಕೊಟ್ಟಿರುವ ಆಸ್ತಿ ಅನುತ್ಪಾದಕವಾಗಿದೆ. ಅರಣ್ಯ ಭೂಮಿಯ ಒಂದು ಇಂಚು ಭೂಮಿಯನ್ನು ವಕ್ಫ್​ಗೆ ನೀಡಬಾರದು" ಎಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net