

ಬೆಂಗಳೂರು: ರಾಕಿಂಗ್ ಸ್ಟಾರ್ ಎಂದು ಖ್ಯಾತಿಯಾಗಿದ್ದ ನಟ ಯಶ್ ಕೆಜಿಎಫ್ ಸಿನಿಮಾದ ನಂತರ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಕರುನಾಡಿನಲ್ಲಿ ಮಾತ್ರವಲ್ಲಿ ಭಾರತದ ಹೊರತಾಗಿಯೂ ವಿದೇಶಗಳಲ್ಲೂ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಯಶ್ ಪ್ರತಿ ಸಣ್ಣ ಮತ್ತು ದೊಡ್ಡ ಸಂತೋಷದ ವಿಚಾರಗಳನ್ನು ಅಭಿಮಾನಿ ಬಳಗದೊಂದಿಗೆ ಹಂಚಿಕೊಳ್ಳುತ್ತಾರೆ. ಜನವರಿ 8 ರಂದು ನಟ ಯಶ್ ಅವರ ಹುಟ್ಟುಹಬ್ಬ ಎಂಬುದು ಅವರ ಫ್ಯಾನ್ಸ್ಗೆ ಗೊತ್ತೆ ಇದೆ.(Toxic)
ಹಿರಿತೆರೆಯಲ್ಲಿ ನಟ ಯಶ್ ಅವರನ್ನು ನೋಡುವ ಕ್ರೇಜ್ ಆಗಾಗ ಅಭಿಮಾನಿಗಳಲ್ಲಿ ಕಂಡುಬರುತ್ತದೆ. ಅವರ ಮುಂಬರುವ ಪ್ರಾಜೆಕ್ಟ್‌ಗಳ ವಿಷಯಕ್ಕೆ ಬಂದರೆ ಸಿನಿಮಾ ಪ್ರೇಮಿಗಳ ಕುತೂಹಲಕ್ಕೆ ಮಿತಿಯೇ ಇಲ್ಲ. ಯಶ್ ತನ್ನು ಹುಟ್ಟಹಬ್ಬಕ್ಕೂ ಮುಂಚಿತವಾಗಿಯೇ ಅಭಿಮಾನಿಗಳಿಗೆ ಗಿಫ್ಟ್ ನೀಡಿದ್ದಾರೆ. ತನ್ನ ಮುಂಬರುವ ಸಿನಿಮಾ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಹೊಸ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದಾರೆ.
ಪೋಸ್ಟರ್‌ನಲ್ಲಿ ಯಶ್ ಬಿಳಿ ಟುಕ್ಸೆಡೊ ಜಾಕೆಟ್ ಮತ್ತು ಫೆಡೋರಾವನ್ನು ಧರಿಸಿದ್ದು, ವಿಂಟೇಜ್ ಕಾರಿಗೆ ಒರಗಿಕೊಂಡು ನಿಂತಿರುವುದನ್ನು ನೋಡಬಹುದು. ಜತೆಗೆ ಪೋಸ್ಟರ್‌ನಲ್ಲಿ ಟಾಕ್ಸಿಕ್ ಚಿತ್ರದ ಹೆಸರನ್ನೂ ಬರೆಯಲಾಗಿದೆ. ಆದರೆ ಅದರಲ್ಲಿ ದಿನಾಂಕ ಮತ್ತು ಸಮಯವನ್ನು ಬರೆಯಲಾಗಿದೆ. 8.1.2025 ಮತ್ತು 10:25 am ಎಂದು ಬರೆಯಲಾಗಿದೆ. ಇದನ್ನು ನೋಡಿದ ಅಭಿಮಾನಿಗಳು ಅಲ್ಲಿ ನೀಡಿರುವ ದಿನಾಂಕ ಮತ್ತು ಸಮಯಕ್ಕೆ ಟಾಕ್ಸಿಕ್ ಸಿನಿಮಾದ ಟೀಸರ್ ಬಿಡುಗಡೆಯಾಗಲಿದೆ ಎಂದು ಊಹಿಸುತ್ತಿದ್ದಾರೆ.
ಅಭಿಮಾನಿಗಳು ಪೋಸ್ಟರ್ ನೋಡಿ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. 2000 ಕೋಟಿ ಲೋಡಿಂಗ್, ಜನ್ಮದಿನದ ಶುಭಾಶಯಗಳು ಬಾಸ್, ಬಾಸ್ ಹಿಂತಿರುಗಿದ್ದಾರೆ, ಟಾಕ್ಸಿಕ್ ಪ್ರಪಂಚಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದೇವೆ ಎಂದು ಕಾಮೆಂಟ್ ಮಾಡಿದ್ದಾರೆ.