ಬುದ್ಧಿಮಾಂದ್ಯ ಮಕ್ಕಳ ಶಾಲೆಯಲ್ಲಿ ಯಶ್ ಜನ್ಮದಿನ

yaSH
ಸೊರಬ ಚಂದ್ರಗುತ್ತಿಯ ಯಶ್ ಅಭಿಮಾನಿ ಬಳಗದಿಂದ ನವಚೇತನ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ಯಶ್ ಜನ್ಮದಿನ ಆಚರಿಸಲಾಯಿತು. ಮಣಿಕಂಠ, ಎಸ್.ಅರವಿಂದ, ಪ್ರಶಾಂತ್, ಕಿರಣ, ರಾಕೇಶ್ ಇತರರಿದ್ದರು.
Published on

ಸೊರಬ: ಚಂದ್ರಗುತ್ತಿ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿ ಬಳಗದಿಂದ ಪಟ್ಟಣದ ಹೊಸಪೇಟೆ ಬಡಾವಣೆಯ ನವಚೇತನ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ಸೋಮವಾರ ನಟ ಯಶ್ ಅವರ 38ನೇ ಜನ್ಮದಿನ ಆಚರಿಸಲಾಯಿತು. ಅಭಿಮಾನಿ ಬಳಗದ ಮಣಿಕಂಠ ಮಾತನಾಡಿ, ಭಾರತ ಚಿತ್ರರಂಗವೇ ಸ್ಯಾಂಡಲ್‌ವುಡ್‌ನತ್ತ ತಿರುಗಿ ನೋಡುವಂತೆ ಮಾಡಿದ ಕೀರ್ತಿ ಯಶ್ ಅವರಿಗೆ ಸಲ್ಲುತ್ತದೆ. ಪ್ರಮುಖ ಸ್ಟಾರ್ ನಟರ ಪೈಕಿ ಒಬ್ಬರಾಗಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಮತ್ತಷ್ಟು ಸಾಧನೆ ಮೂಲಕ ಕನ್ನಡ ಚಿತ್ರರಂಗವನ್ನು ಬೆಳೆಸಲಿ ಎಂದು ಆಶಿಸಿದರು. ಯಶ್ ಅವರು ಚಿತ್ರನಟರಾಗಿ ಮಾತ್ರವಲ್ಲದೆ ಅನೇಕ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿ ಯುವಕರಿಗೆ ಮಾರ್ಗದರ್ಶಕರಾಗಿದ್ದಾರೆ. ಅವರ ಜನ್ಮದಿನದಂದು ದುಂದುವೆಚ್ಚ ಮಾಡದೆ ಅಭಿಮಾನಿಗಳು ಸೇರಿ ಬುದ್ಧಿಮಾಂದ್ಯ ಶಾಲೆಯಲ್ಲಿ ಜನ್ಮದಿನ ಆಚರಿಸುತ್ತಿದ್ದೇವೆ ಎಂದರು. ಮುಖ್ಯಶಿಕ್ಷಕ ಎಸ್.ಅರವಿಂದ, ಯಶ್ ಅಭಿಮಾನಿ ಬಳಗದ ಪ್ರಶಾಂತ್, ಕಿರಣ, ರಾಕೇಶ್, ದರ್ಶನ, ಚೇತನಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net