

ಬೆಂಗಳೂರು: ಸ್ಯಾಂಡಲ್ವುಡ್ನ ರಾಕಿಂಗ್ ಸ್ಟಾರ್, ನಟ ಯಶ್ ಅಭಿನಯದ ಬಹುನಿರೀಕ್ಷಿತ 'ಯಶ್ 19' ಸಿನಿಮಾ ಸದ್ದಿಲದ್ದಂತೆ ಸೆಟ್ಟೇರಿದ್ದು, ಚಿತ್ರೀಕರಣದ ಕೆಲಸಗಳು ಭರದಿಂದ ಸಾಗಿದೆ. ಪ್ಯಾನ್ ಇಂಡಿಯಾ 'ಕೆಜಿಎಫ್ 2' ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆದ ನಂತರ ಯಶ್ ಅಷ್ಟಾಗಿ ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ. ಇದೀಗ ರಾಷ್ಟ್ರೀಯ ಪ್ರಶಸ್ತಿ ವಿಜೇತೆ, ಬಾಲಿವುಡ್ ನಿರ್ದೇಶಕಿ ಗೀತು ಮೋಹನ್ದಾಸ್ ಅವರೊಟ್ಟಿಗೆ ಈ ಸಿನಿಮಾದಲ್ಲಿ ಭಾಗಿಯಾಗಿರುವ ಸಂಗತಿ ಅವರ ಅಪಾರ ಅಭಿಮಾನಿ ಬಳಗಕ್ಕೆ ಭಾರೀ ಸಂತಸ ನೀಡಿದೆ.
ಬಿಡುಗಡೆಗೂ ಮುನ್ನವೇ ಸಿಕ್ಕಾಪಟ್ಟೆ ನಿರೀಕ್ಷೆ ಹಾಗೂ ಭರವಸೆ ಮೂಡಿಸಿರುವ 'ಯಶ್ 19' ಸಿನಿಮಾದ ಶೀರ್ಷಿಕೆ ಮತ್ತು ಟೀಸರ್ ಅನ್ನು ಚಿತ್ರತಂಡ ನವೆಂಬರ್ 1, ಕರ್ನಾಟಕ ರಾಜ್ಯೋತ್ಸವ ದಿನದಂದು ಅನಾವರಣಗೊಳಿಸಬಹುದು ಎಂಬ ಸುದ್ದಿ ಸದ್ಯ ಸಾಮಾಜಿಕ ಜಾಲತಾಣವನ್ನು ಸುತ್ತುವರೆದಿದೆ. ಆದ್ರೆ, ಈ ಬಗ್ಗೆ ಇಲ್ಲಿಯವರೆಗೂ ಯಾವುದೇ ಅಧಿಕೃತ ಮಾಹಿತಿಯೂ ಹೊರಬಂದಿಲ್ಲ ಎಂಬುದು ಗಮನಾರ್ಹ.
ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಮೂಡಿಬರಲಿರುವ 'ಯಶ್ 19' ಚಿತ್ರದಲ್ಲಿ ಯಶ್, ಸಂಯುಕ್ತಾ ಮೆನನ್, ನವಾಜುದ್ದೀನ್ ಸಿದ್ದಿಕಿ, ಧನಂಜಯ್, ಶೈನ್ ಟಾಮ್ ಚಾಕೋ ಮುಂತಾದವರ ತಾರಾಗಣವಿದೆ. ಈ ಬಹುನಿರೀಕ್ಷಿತ ಚಿತ್ರದ ಕುರಿತಂತೆ ಹೆಚ್ಚಿನ ವಿವರಗಳನ್ನು ಸದ್ಯದಲ್ಲೇ ಚಿತ್ರತಂಡ ಬಹಿರಂಗಪಡಿಸುವ ನಿರೀಕ್ಷೆಯಿದೆ,(ಏಜೆನ್ಸೀಸ್).