ಗಂಡು ಮಗುವಿಗೆ ಜನ್ಮ ಕೊಟ್ಟ 'ಉಲ್ಲಾಸ ಉತ್ಸಾಹ' ನಟಿ ಯಾಮಿ ಗೌತಮ್; ಕಂದಮ್ಮನಿಗೆ ಇಟ್ಟ ಹೆಸರೇನು ಗೊತ್ತಾ?

Yami Gautam Aditya Dhar welcome baby boy name him Vedavid
Published on

 ಬೆಂಗಳೂರು: ಸ್ಯಾಂಡಲ್​ವುಡ್​ ನಟ ಗಣೇಶ್​​ ಅಭಿನಯದ ಉಲ್ಲಾಸ ಉತ್ಸಾಹ ನಟಿ ಯಾಮಿ ಗೌತಮ್​​ ಅವರು  ಮೇ 10 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ನಟಿ ಯಾಮಿ ಗೌತಮ್ ಮುದ್ದಾದ ಗಂಡು ಮಗುವಿನ ತಾಯಿಯಾಗಿದ್ದಾರೆ. ಸೋಶಿಯಲ್​​ ಮೀಡಿಯಾದಲ್ಲಿ ಈ ಸುದ್ದಿ ಹಂಚಿಕೊಳ್ಳುವ ಮೂಲಕವಾಗಿ ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಯಾಮಿ ಗೌತಮ್ , ಆದಿತ್ಯ ಧರ್ ದಂಪತಿ ಮಗುವಿನ ನೀರಿಕ್ಷೆಯಲ್ಲಿರುವುದನ್ನು ಘೋಷಿಸಿದ್ದರು.  ಈಗ ದಂಪತಿ ಮಗನ ಜನನದ ಸುದ್ದಿಯೊಂದಿಗೆ ಅಭಿಮಾನಿಗಳನ್ನು ಸಂತೋಷಪಡಿಸಿದ್ದಾರೆ. ಈ ಶುಭ ಸುದ್ದಿಯನ್ನು ಯಾಮಿ ಗೌತಮ್ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಯಾಮಿ ಇನ್‌ಸ್ಟಾಗ್ರಾಮ್‌ನಲ್ಲಿ ಮಗನಿಗೆ ಜನ್ಮ ನೀಡಿರುವುದಾಗಿ ಅಧಿಕೃತವಾಗಿ ಪ್ರಕಟಿಸಿದ್ದಾರೆ. ಇದರೊಂದಿಗೆ ತಮ್ಮ ಮಗನ ಹೆಸರನ್ನೂ ಬಹಿರಂಗಪಡಿಸಿದ್ದಾರೆ.

ಯಾಮಿ ಪತಿ ಆದಿತ್ಯ ಧಾರ್ ಕೂಡ ಪೋಸ್ಟ್ ಮಾಡಿದ್ದು, ಅಕ್ಷಯ ತೃತೀಯ ದಿನದಂದು ತನ್ನ ಮಗ ಜನಿಸಿದ ಎಂದು ಹೇಳಿದ್ದಾರೆ. ದಂಪತಿ ಮೇ 10 ರಂದು ತಮ್ಮ ಮಗನನ್ನು ಈ ಜಗತ್ತಿಗೆ ಸ್ವಾಗತಿಸಿದ್ದಾರೆ. ಆದಿತ್ಯ ಮತ್ತು ಯಾಮಿ ತಮ್ಮ ಇನ್​ಸ್ಟಾಗ್ರಾಮ್​​ ಪೋಸ್ಟ್‌ನಲ್ಲಿ ತಮ್ಮ ಮಗನ ಹೆಸರನ್ನು ಸಹ ಉಲ್ಲೇಖಿಸಿದ್ದಾರೆ. ಆದಿತ್ಯ-ಯಾಮಿ ತಮ್ಮ ಪುಟ್ಟ ಮಗನಿಗೆ ವೇದಗಳ ಹೆಸರಿಟ್ಟಿದ್ದಾರೆ. ದಂಪತಿ ಹೊಸ ಅತಿಥಿಗೆ ವೇದವಿದ್ ಎಂದು ಹೆಸರಿಸಿದ್ದಾರೆ. ಇದು ಸಂಸ್ಕೃತದ ಹೆಸರು, ಇದನ್ನು ವೇದ ಮತ್ತು ವಿದ್ ಅನ್ನು ಸಂಯೋಜಿಸಿ  ಈ ಹೆಸರನ್ನು ಇಡಲಾಗಿದೆ.

'ಸೂರ್ಯ ಆಸ್ಪತ್ರೆಯ ಅಸಾಧಾರಣ ಸಮರ್ಪಿತ ಮತ್ತು ಅದ್ಭುತ ವೈದ್ಯಕೀಯ ವೃತ್ತಿಪರರಿಗೆ, ವಿಶೇಷವಾಗಿ ಡಾ. ಭೂಪೇಂದ್ರ ಅವಸ್ಥಿ ಮತ್ತು ಡಾ. ರಂಜನಾ ಧನು ಅವರು ಉತ್ತಮ ಚಿಕಿತ್ಸೆ ನೀಡಿದ್ದಕ್ಕೆ ಧನ್ಯವಾದ. ಪೋಷಕರ ಈ ಸುಂದರ ಪ್ರಯಾಣವನ್ನು ನಾವು ಪ್ರಾರಂಭಿಸಿದಾಗ, ನಮ್ಮ ಮಗನ ಉಜ್ವಲ ಭವಿಷ್ಯಕ್ಕಾಗಿ ನಾವು ಕುತೂಹಲದಿಂದ ಎದುರು ನೋಡುತ್ತೇವೆ. ಅವರ ಪ್ರತಿಯೊಂದು ಸಾಧನೆಯೊಂದಿಗೆ, ಅವರು ನಮ್ಮ ಇಡೀ ಕುಟುಂಬಕ್ಕೆ ಮತ್ತು ನಮ್ಮ ಪ್ರೀತಿಯ ದೇಶಕ್ಕೆ ಹೆಮ್ಮೆಯ ಸಂಕೇತವಾಗುತ್ತಾರೆ ಎಂಬ ಭರವಸೆ ಮತ್ತು ವಿಶ್ವಾಸದಿಂದ ನಾವು ತುಂಬಿದ್ದೇವೆ ಎಂದು ಯಾಮಿ ಗೌಮತ್​​ ಬರೆದುಕೊಂಡಿದ್ದಾರೆ. ಈ ಪೋಸ್ಟ್​ ನೋಡಿದ ಅಭಿಮಾನಿಗಳು ಮೆಚ್ಚುಗೆ ಸೂಚಿಸಿ ಶುಭ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net