ಯಲ್ಲಮ್ಮ, ಚಾಮುಂಡೇಶ್ವರಿ ತಾಯಿ ಕ್ಷಮಿಸಲ್ಲ

siddaramaih
Published on


ಸಿದ್ದರಾಮಯ್ಯ ಅವರನ್ನು ಯಲ್ಲಮ್ಮ, ಚಾಮುಂಡೇಶ್ವರಿ ತಾಯಿ ಕ್ಷಮಿಸಲ್ಲ ಎಂದು ಕೆ.ಎಸ್.ಈಶ್ವರಪ್ಪ ತಿಳಿಸಿದರು. ಹುಬ್ಬಳ್ಳಿ ಗಲಬೆ ಪ್ರಕರಣ ಕೇಸ್ ವಾಪಸ್ ಕುರಿತು ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಸವದತ್ತಿ ಯಲ್ಲಮ್ಮನ ಪೂಜೆ ಮಾಡಿದ್ದಾರೆ. ಪಾರ್ವತಮ್ಮನವರ ಹೆಸರಿನಲ್ಲಿ ಪೂಜೆ ಸಲ್ಲಿಸಿ ಹಣೆಗೆ ಕುಂಕುಮ ಇಟ್ಟುಕೊಂಡಿದ್ದಾರೆ. ಮೇಲಿಂದ ಮೇಲೆ ಶ್ರೀ ಚಾಮುಂಡೇಶ್ವರಿ ಬೆಟ್ಟಕ್ಕೆ ಹೋಗಿ ಪೂಜೆ ಸಲ್ಲಿಸುತ್ತಿದ್ದಾರೆ. ನಿಮ್ಮ ಶ್ರೀಮತಿಯವರು ಕೂಡ ಸಾಕಷ್ಟು ಪೂಜೆ ಮಾಡಿಕೊಂಡು ಬಂದಿದ್ದಾರೆ. ನೀವು ಕೂಡ ಪ್ರಾಮಾಣಿಕವಾಗಿ ಪೂಜೆ ಸಲ್ಲಿಸಿ, ಕುಂಕುಮ ಹಾಕಿಕೊಳ್ಳುವ ಕೆಲಸ ಮಾಡುತ್ತಿದ್ದೀರಿ. ಆದರೆ ಹುಬ್ಬಳ್ಳಿಯಲ್ಲಿ ಯಾರು ಗಲಭೆ ಸೃಷ್ಟಿಸಿದ್ದರು, ಪೊಲೀಸರ ಮೇಲೆ ಯಾರು ದೌರ್ಜನ್ಯ ಮಾಡಿದ್ದರು ಅವರ ಪ್ರಕರಣವನ್ನು ರದ್ದು ಮಾಡಲು ಮುಂದಾಗಿರುವುದು ಖಂಡನೀಯ. ಒಂದು ಕಡೆ ಪೂಜೆ ಸಲ್ಲಿಸಿ ಕುಂಕುಮ ಹಾಕಿಕೊಳ್ಳುತ್ತಿರಾ. ಮತ್ತೊಂದೆಡೆ ದೇವಸ್ಥಾನ ಧ್ವಂಸಕ್ಕೆ ಮುಂದಾದವರ ಪ್ರಕರಣ ರದ್ದು ಮಾಡಲು ಮುಂದಾಗಿರುವುದನ್ನು ನಾವು ಸಹಿಸಲ್ಲ. ವೋಟಿಗಾಗಿ ಓಲೈಕೆ ಮಾಡೋದು ಸರಿಯಲ್ಲ. ದೇಶದ್ರೋಹಿ, ಭಯೋತ್ಪಾದಕರ ಕೇಸ್‌ನ್ನು ವಾಪಸ್ ಪಡೆಯೋದು ಸರಿಯಲ್ಲ. ಅದನ್ನು ಸವದತ್ತಿ ಯಲ್ಲಮ್ಮ, ಚಾಮುಂಡೇಶ್ವರಿ ತಾಯಿ ಕ್ಷಮಿಸಲ್ಲ. ಮುಸಲ್ಮಾನರ ತುಷ್ಟೀಕರಣವೇ ಇದಕ್ಕೆಲ್ಲ ಕಾರಣ ಎಂದು ಕಿಡಿಕಾರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net