ಯಳಂದೂರು: ತಾಲೂಕಿನ ಬಿಆರ್‌ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಕಾಡಂಚಿನ ಗ್ರಾಮವಾದ ಗುಂಬಳ್ಳಿ ಕೆರೆಯ ಬಳಿ ಮೇಕೆ ಬೇಟೆಯಾಡಿದ್ದ ಹೆಬ್ಬಾವನ್ನು ಉರಗ ರಕ್ಷಕ ಸಯ್ಯದ್ ಮುನಾಫ್ ಸಹಯೋಗದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ.
ಗ್ರಾಮದ ನಂಜುಂಡಯ್ಯ ಎಂಬುವರಿಗೆ ಸೇರಿದ ಮೇಕೆಗಳನ್ನು ಇತ್ತೀಚೆಗೆ ಕೆರೆಯ ಬಳಿ ಮೇಯಲು ಬಿಡಲಾಗಿತ್ತು. ಕೆರೆಯ ಪೊದೆಯಲ್ಲಿದ್ದ ಇದ್ದ ಭಾರಿ ಗಾತ್ರದ ಹೆಬ್ಬಾವು ಒಂದು ಮೇಕೆಯನ್ನು ಬೇಟಿಯಾಡಿ ಅರ್ಧ ನುಂಗಿ, ಅಲ್ಲೆ ಮಲಗಿದೆ. ಮೇಕೆಯ ಚೀರಾಟದ ಶಬ್ದ ಕೇಳಿದ ನಂಜುಂಡಯ್ಯ ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಸಿಬ್ಬಂದಿ ಹಾಗೂ ಸೈಯರ್ ಮುನಾಫ್ ಹಾವನ್ನು ರಕ್ಷಣೆ ಮಾಡಿ ಬಿಆರ್‌ಟಿ ಅರಣ್ಯಕ್ಕೆ ಬಿಟ್ಟಿದ್ದಾರೆ.