

ಯಲಬುರ್ಗಾ: ಆಂಬುಲೆನ್ಸ್ , ಬೈಕ್ ನಡುವಿನ ಅಪಘಾತದಲ್ಲಿ ಗಾಯಗೊಂಡಿದ್ದ ಖಾಸಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ, ಬೈಕ್ ಸವಾರ ಭೀಮಪ್ಪ ಕುರಿ ಬುಧವಾರ ಮೃತಪಟ್ಟಿದ್ದಾರೆ. ಮಗಳೊಂದಿಗೆ ಕೊಪ್ಪಳ-ಕುಷ್ಟಗಿ ರಸ್ತೆ ಕ್ರಾಸ್ ಮಾಡುತ್ತಿದ್ದಾಗ ವೇಗವಾಗಿ ಬಂದ ಆಂಬುಲೆನ್ಸ್ ಡಿಕ್ಕಿ ಹೊಡೆದಿದ್ದರಿಂದ ಗಾಯಗೊಂಡು ಕೊಪ್ಪಳ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೆ ಬುಧವಾರ ಬೆಳಗಿನ ಜಾವ ಮೃತಪಟ್ಟಿದ್ದಾರೆ. ಮೃತರ ಪುತ್ರಿ ಆರೋಗ್ಯವಾಗಿದ್ದು, ಆಂಬುಲೆನ್ಸ್‌ನಲ್ಲಿ ಮಂಜುನಾಥ ಅಳ್ಳಳ್ಳಿ, ಸುಜಾತಾ ಹಿರೇಮನಿ, ಗಂಗಪ್ಪ ಹಿರೇಮನಿ ಹಾಗೂ ಲಕ್ಷ್ಮಣ ಹಿರೇಮನಿ ಎಂಬುವರಿಗೆ ಗಾಯಗಳಾಗಿವೆ. ಬೇವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.