ರಾಣೆಬೆನ್ನೂರ: ಇಲ್ಲಿಯ ಕರಾವಳಿ ಬಳಗದ ವತಿಯಿಂದ ಸ್ವಾತಂತ್ರೃ ದಿನಾಚರಣೆ ಅಂಗವಾಗಿ ಆ. 15ರಂದು ರಾತ್ರಿ 8ಗಂಟೆಗೆ ನಗರದ ಕರಾವಳಿ ಸಭಾಭವನದಲ್ಲಿ ಶಿವದೂತ ಪಂಜುರ್ಲಿ ಎಂಬ ಪುಣ್ಯ ಕಥಾನಕ ಯಕ್ಷಗಾನ ಕಾರ್ಯಕ್ರಮ ಜರುಗಲಿದೆ.
ಮಂದರ್ತಿ ನಡೂರು ಮಹಾಗಣಪತಿ ಯಕ್ಷಗಾನ ಮಂಡಳಿ ಯಕ್ಷಗಾನ ನಡೆಸಿಕೊಡಲಿದ್ದಾರೆ. ಹುಬ್ಬಳ್ಳಿ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಹರಿಓಂ ಸುಧಾಕರ ಶೆಟ್ಟಿ ಉದ್ಘಾಟಿಸುವರು. ಕರಾವಳಿ ಬಳಗದ ಅಧ್ಯಕ್ಷ ರತ್ನಾಕರ ಕುಂದಾಪುರ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.