ಯಾದಗಿರಿ ಬಸ್​ ನಿಲ್ದಾಣದಲ್ಲಿ ಅನುಮಾನಾಸ್ಪದ ಬ್ಯಾಗ್​ ಪತ್ತೆ; ಆತಂಕವಿಲ್ಲ ಎಂದ ತಪಾಸಣೆ ನಡೆಸಿದ ಪೊಲೀಸರು

YADAGIRI
Published on

ಯಾದಗಿರಿ: ಇಲ್ಲಿನ ಕೇಂದ್ರ ಬಸ್​ನಿಲ್ದಾಣ ಮತ್ತು ಅಜೀಜ್​ ಮಸೀದಿ ಬಳಿ ತಲಾ ಒಂದೊಂದು ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿದ್ದು ಆತಂಕ ಸೃಷ್ಟಿಯಾಗಿತ್ತು. ಮಂಗಳೂರಿನಲ್ಲಿ ಬಾಂಬ್ ಪತ್ತೆ ಹಿನ್ನೆಲೆಯಲ್ಲಿ ಬ್ಯಾಗ್ ಕಂಡು ಸಾರ್ವಜನಿಕರು ಆತಂಕಗೊಂಡಿದ್ದರು.

ಅಪರಿಚಿತ ವ್ಯಕ್ತಿ ಬ್ಯಾಗ್ ಬಿಟ್ಟು ಹೋಗಿದ್ದಾನೆ. ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ತಂಡ ಆಗಮಿಸಿ ಶ್ವಾನದಳದಿಂದ ತಪಾಸಣೆ ನಡೆಸಲಾಯಿತು. ಬ್ಯಾಗ್ ನಲ್ಲಿ ಬಟ್ಟೆ ಮತ್ತು ಹಣ ಪತ್ತೆಯಾಗಿದೆ.

ಸ್ಥಳಕ್ಕೆ ಡಿವೈಎಸ್ಪಿ ಶರಣಪ್ಪ ಅವರ ನೇತೃತ್ವದ ತಂಡ ಭೇಟಿ ನೀಡಿ ಪರಶೀಲನೆ ನಡೆಸಿತು. ಕೇಂದ್ರ ಬಸ್​ನಿಲ್ದಾಣದಲ್ಲಿ ಬ್ಯಾಗ್ ಪತ್ತೆಯಾದ ಬೆನ್ನಲ್ಲೇ ನಗರದ ಅಜೀಜ್ ಕಾಲನಿಯ ಸನಾ ಮಸೀದಿ ಪಕ್ಕದಲ್ಲಿ ಮತ್ತೊಂದು ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿದೆ.

ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ ಆಗಮಿಸಿ ಬ್ಯಾಗ್​ ಪರಿಶೀಲನೆ ನಡೆಸಿತು. ಬ್ಯಾಗ್​ನಲ್ಲಿ ಪುಸ್ತಕ, ಐಡಿ ಕಾರ್ಡ್, ಶೂ ಹಾಗೂ ಬಟ್ಟೆ ಪತ್ತೆ ಯಾಗಿದ್ದ ಆತಂಕಕ್ಕೆ ಕಾರಣವಿಲ್ಲ ಎನ್ನಲಾಗಿದೆ.

ನೆಹರು ಶಾಲೆಯ ವಿದ್ಯಾರ್ಥಿ ಶೇಕ್ ಇಮ್ರಾನ್ ಹೆಸರಿನ ಐಡಿ ಕಾರ್ಡ್ ಪತ್ತೆಯಾಗಿದ್ದು ಸಾರ್ವಜನಿಕರು ಗಾಬರಿಯಾಗುವುದು ಬೇಡ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net