

Hulk Hogan : ದಂತಕಥೆಯ ಕುಸ್ತಿಪಟು ಮತ್ತು WWF (ಈಗ WWE) ಸೂಪರ್‌ಸ್ಟಾರ್ ಹಲ್ಕ್ ಹೊಗನ್ (71) ನಿನ್ನೆ ಬೆಳಗ್ಗೆ (ಜುಲೈ 24) ನಿಧನರಾದರು. ಹೊಗನ್, ಅಮೆರಿಕದ ಫ್ಲೋರಿಡಾದಲ್ಲಿರುವ ತಮ್ಮ ಮನೆಯಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
1953, ಆಗಸ್ಟ್ 11ರಂದು ಜನಿಸಿದ ಹೊಗನ್ ಅವರ ನಿಜವಾದ ಹೆಸರು ಟೆರ್ರಿ ಜೀನಿ ಬೊಲಿಯಾ. 1980ರ ದಶಕದಲ್ಲಿ WWF ನೊಂದಿಗೆ ಹೊಗನ್ ಪ್ರಸಿದ್ಧರಾದರು. WWF ರೆಸಲ್‌ಮೇನಿಯಾದ ಮೊದಲ ಒಂಬತ್ತು ಆವೃತ್ತಿಗಳಲ್ಲಿ ಹೊಗನ್ ಎಂಟು ಪ್ರಶಸ್ತಿಗಳನ್ನು ಗೆದ್ದರು.
WWE ಹಾಲ್ ಆಫ್ ಫೇಮ್‌ಗೆ ಹೋಗನ್ ಅವರನ್ನು ಸೇರಿಸಲಾಗಿದೆ. 1984 ರಲ್ಲಿ ಹೊಗನ್ ತಮ್ಮ ಮೊದಲ WWF ಚಾಂಪಿಯನ್‌ಶಿಪ್ ಗೆದ್ದರು. ತಮ್ಮ ವೃತ್ತಿಜೀವನದ ಅವಧಿಯಲ್ಲಿ, ಹೊಗನ್ ಅಬರಿ ಆಂಡ್ರೆ ದಿ ಜೈಂಟ್, ಮ್ಯಾಕೊ ಮ್ಯಾನ್ ರಾಂಡಿ ಸ್ಯಾವೇಜ್ ಮತ್ತು ದಿ ಅಲ್ಟಿಮೇಟ್ ವಾರಿಯರ್‌ನಂತಹ ಪ್ರಸಿದ್ಧ ಕುಸ್ತಿಪಟುಗಳೊಂದಿಗೆ ಕುಸ್ತಿಯಾಡಿದರು. ಹೊಗನ್ ಅವರು ತಮ್ಮ ಮೀಸೆಯಿಂದಲೇ ಹೆಚ್ಚು ಪ್ರಸಿದ್ಧರಾಗಿದ್ದರು.
ಕುಸ್ತಿಯ ಹೊರತಾಗಿ, ಹೊಗನ್ ಚಲನಚಿತ್ರಗಳು ಮತ್ತು ಟಿವಿ ರಿಯಾಲಿಟಿ ಶೋಗಳಲ್ಲಿಯೂ ನಟಿಸಿದ್ದಾರೆ. ಕಳೆದ ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಹೊಗನ್ ಡೊನಾಲ್ಡ್ ಟ್ರಂಪ್ ಪರ ಪ್ರಚಾರ ಮಾಡಿದರು. ಹೊಗನ್ ಭಾರತದಲ್ಲಿಯೂ ಅಭಿಮಾನಿಗಳನ್ನು ಹೊಂದಿದ್ದಾರೆ. 80ರ ದಶಕದಲ್ಲಿ ಹೊಗನ್ ಮಕ್ಕಳಿಗೆ ಚಿರಪರಿಚಿತರಾಗಿದ್ದರು. (ಏಜೆನ್ಸೀಸ್)