ಐತಿಹಾಸಿಕ ಮೈಸೂರು ದಸರಾ ಉದ್ಘಾಟನೆಗೆ ಲೇಖಕಿ ಭಾನು ಮುಷ್ತಾಕ್​ಗೆ ಆಹ್ವಾನ: ಸಿಎಂ ಸಿದ್ದರಾಮಯ್ಯ| Banu Musthaq

WhatsApp Image 2025-08-22 at 3.59.55 PM
Published on

Banu Musthaq: ಈ ಬಾರಿ ನಡೆಯಲಿರುವ ಐತಿಹಾಸಿಕ ಮೈಸೂರು ದಸರಾ ಉದ್ಘಾಟನೆಗೆ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಪಡೆದ ಲೇಖಕಿ ಮತ್ತು ಹೋರಾಟಗಾರ್ತಿ ಭಾನು ಮುಷ್ತಾಕ್ ಅವರನ್ನು ಆಹ್ವಾನಿಸಲಾಗಿದೆ ಎಂದು ಶುಕ್ರವಾರ (ಆಗಸ್ಟ್ 22) ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಕುರಿತು ವಿಧಾನಸೌಧದ ಬಳಿ ಮಾತನಾಡಿರುವ ಅವರು, ಬಾನು ಮುಸ್ತಾಕ್ ಅವರಿಗೆ ಆಹ್ವಾನಿಸಿದ್ದೇವೆ. ನಾನು ಕೂಡ ಮಾತನಾಡಿದ್ದೇನೆ‌. ಈ ಬಾರಿ ದಸರಾ ಮಹೋತ್ಸವ 11 ದಿನಗಳ ಕಾಲ ನಡೆಯಲಿದೆ‌ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರನ್ನು ಈ ಬಾರಿಯ ನಾಡಹಬ್ಬ ದಸರಾ ಉದ್ಘಾಟನೆ ಆಹ್ವಾನಿಸಿ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಮತ್ತು ಖುದ್ದಾಗಿ ಭೇಟಿಯಾಗಿ ಆಹ್ವಾನ ನೀಡುತ್ತಾರೆ ಎಂದು ಈ ಮೊದಲು ಸುದ್ದಿ ಆಗಿತ್ತು.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸೋನಿಯಾ ಗಾಂಧಿಗೆ ಆಹ್ವಾನ ನೀಡುವುದರ ಕುರಿತು ಪರ-ವಿರೋಧ ಚರ್ಚೆ ನಡೆದಿತ್ತು. ಸದ್ಯ ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದ ಸಿಎ ಕಚೇರಿ ಸೋನಿಯಾ ಗಾಂಧಿ ಉದ್ಘಾಟಿಸಲಿದ್ದಾರೆ ಎಂಬ ಸುದ್ದಿ ಕೇವಲ ಕಾಲ್ಪನಿಕ. ಇದು ಸತ್ಯಕ್ಕೆ ದೂರವಾದದ್ದು. ಈ ರೀತಿಯ ಯಾವುದೇ ಉದ್ದೇಶವಾಗಲಿ, ಪ್ರಸ್ತಾವನೆ ಆಗಲಿ ಸರ್ಕಾರದ ಮುಂದಿಲ್ಲ ಹೇಳಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net