ಕಥೆಗಾರ-ರಂಗಕರ್ಮಿ ಬಸವರಾಜು ಕುಕ್ಕರಹಳ್ಳಿ ನಿಧನ

basavarajkukkarahalli
Published on

ಮೈಸೂರು: ಖ್ಯಾತ ಕಥೆಗಾರ, ಲೇಖಕ, ರಂಗಕರ್ಮಿ ಬಸವರಾಜು ಕುಕ್ಕರಹಳ್ಳಿ(67) ಅವರು ಗುರುವಾರ ನಿಧನರಾದರು.

ಧನಗಳ್ಳಿ ಸಿದ್ದಯ್ಯ ಮತ್ತಯ ನಿಂಗಮ್ಮ ದಂಪತಿ ಪುತ್ರರಾಗಿ 1955ರ ಅಕ್ಟೋಬರ್​ 2ರಂದು ಮೈಸೂರಿನ ಕುಕ್ಕರಹಳ್ಳಿಯಲ್ಲಿ ಬಸವರಾಜು ಜನಿಸಿದ್ದರು. ಗಂಥಾಲಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದು ಮೈಸೂರಿನ ಮಹಾರಾಜ ಪಿಯು ಕಾಲೇಜು ಮತ್ತು ಮರಿಮಲ್ಲಪ್ಪನವರ ಪಿಯು ಪೂರ್ವ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದರು.

ವೃತ್ತಿಯಲ್ಲಿ ಗ್ರಂಥಪಾಲಕರಾಗಿದ್ದರೂ ಬರಹದತ್ತ ಆಸಕ್ತಿ ಹೊಂದಿದ್ದ ಬಸವರಾಜು ಅವರು ‘ನೀನೇ ಕಾರಣ’, ‘ಸಾಕಮ್ಮನ ಕಥೆ’, ‘ಸಮಾನತೆ’, ‘ಹುಲಿ ಮತ್ತು ಕತ್ತೆ’ ಸೇರಿದಂತೆ ಹಲವು ಕಥಾ ಪುಸ್ತಕಗಳನ್ನು ರಚಿಸಿದ್ದಾರೆ. ಹಲವು ನಾಟಕಗಳು, ಸಾಕ್ಷರತೆಯ ಬೀದಿ ನಾಟಕಗಳಲ್ಲೂ ಅಭಿನಯಿಸಿದ್ದಾರೆ. ವಿವಿಧ ಲೇಖಕರುಗಳ ನಾಟಕಗಳನ್ನೂ ಸಂಗ್ರಹಿಸಿ ಪುಸ್ತಕ ಹೊರತಂದಿದ್ದಾರೆ. ಪತ್ರಿಕೆಗಳಲ್ಲಿ ಹಲವು ಲೇಖನಗಳು ಪ್ರಕಟವಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net