ಸಾಹಿತಿ ಅಬ್ಬಾಸ್ ಮೇಲಿನಮನಿ ಇನ್ನಿಲ್ಲ

Sahiti Died
Published on

ಬಾಗಲಕೊಟೆ: ಹಿರಿಯ ಸಾಹಿತಿ, ಹೆಸರಾಂತ ಕತೆಗಾರ ಪ್ರೊ.ಅಬ್ಬಾಸ್ ಮೇಲಿನಮನಿ(66) ಸೋಮವಾರ ತೀವ್ರ ಹೃದಯಾಘಾತದಿಂದ ದಾವಣಗೆರೆಯಲ್ಲಿ ನಿಧನರಾದರು. ಅವರಿಗೆ ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಇದ್ದಾರೆ. ಮಂಗಳವಾರ ಬೆಳಗ್ಗೆ 9 ಗಂಟೆಗೆ ಮುಸ್ಲಿಂ ಸಂಪ್ರದಾಯದಂತೆ ಹಳೇ ಬಾಗಲಕೋಟೆಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಕಥಾ ಸಂಕಲನಗಳು: ಪ್ರೀತಿಸಿದವರು, ಕಣ್ಣ ಮುಂದಿನ ಕಥೆ, ಅರ್ಧಸತ್ಯಗಳು ಇತ್ಯಾದಿ. ಕವನ ಸಂಕಲನಗಳು: ಕಥೆಯಾದಳು ಹುಡುಗಿ, ಭಾವೈಕ್ಯ ಬಂಧ, ಪ್ರೀತಿ ಬದುಕಿನ ಹಾಡು. ಕಾದಂಬರಿ: ಜನ್ನತ್ ಮೊಹಲ್ಲ. ಲೇಖನ: ಸೌಹಾರ್ದ ಸಂಸ್ಕೃತಿ. ಸಂಪಾದಿತ ಕೃತಿ: ಸಣ್ಣಕತೆ, ಕ್ಯಾದಗಿ ಪ್ರಜ್ಞೆ ಮುಳುಗದ ಕಥೆಗಳು.

ಪ್ರಶಸ್ತಿ-ಪುರಸ್ಕಾರಗಳು: ಮಂಗಳೂರಿನ ಮಹ್ಯುದ್ದೀನ್ ಸಾಹಿತ್ಯ ಪ್ರತಿಷ್ಠಾನ ಪ್ರಶಸ್ತಿ, ಶಿವಮೊಗ್ಗ ಕ.ಸಾ.ಪ. ಲಂಕೇಶ್ ಕಥಾ ಪ್ರಶಸ್ತಿ, ತುಷಾರ ಎಚ್.ಎಂ.ಟಿ. ಅತ್ಯುತ್ತಮ ಕಥಾ ಪ್ರಶಸ್ತಿಗಳು ಲಭಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net