ಸಮೀಕ್ಷೆ ವೇಳೆ ಹೊಲಯ ಎಂದೇ ಬರೆಯಿಸಿ

ಧನರಾಜ್.
ಧನರಾಜ್
Published on

ಬೈಲುಕುಪ್ಪೆ: ರಾಜ್ಯದಲ್ಲಿ ಒಳ ಮೀಸಲಾತಿ ಸಮೀಕ್ಷೆ ಮೇ 5 ರಿಂದ ನಡೆಯಲಿದ್ದು ಈ ವೇಳೆ ಹೊಲಯ ಎಂದು ಬರೆಯಿಸಿ ಎಂದು ಬೆಣಗಾಲು ಗ್ರಾಮ ಪಂಚಾಯಿತಿ ಸದಸ್ಯ ಧನರಾಜ್ ತಿಳಿಸಿದ್ದಾರೆ.

ಪಿರಿಯಾಪಟ್ಟಣ ತಾಲೂಕಿನ ಬೆಣಗಲು ಗ್ರಾಮ ಪಂಚಾಯಿತಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ವತಿಯಿಂದ ಒಳ ಮೀಸಲಾತಿ ಜಾರಿಗಾಗಿ ನಡೆಯುತ್ತಿರುವ ಪರಿಶಿಷ್ಟ ಜಾತಿಗಳ ಜಾತಿಗಣತಿಯಲ್ಲಿ ಮೇ 5ರಿಂದ 17ರವರೆಗೆ ಮನೆಯಲ್ಲಿಯೇ ಇದ್ದು ಜಾತಿ ಸಮೀಕ್ಷೆದಾರರು ಮನೆಗೆ ಬಂದಾಗ ಎಲ್ಲರೂ ಅವರಿಗೆ ಸ್ಪಂದಿಸಿ ಹೊಲಯ ಎಂದು ಮಾತ್ರ ಬರೆಸಿರಿ. ಹೊಲಯ ಸಂಬಂಧಿತ ಜಾತಿಗಳ ಆದಿ ಕರ್ನಾಟಕ, ಬಲಗೈ, ಛಲವಾದಿ, ಇತ್ಯಾದಿ ಬರೆಸಬಾರದು. ಹೊಲಯ ಪ್ರಮುಖ ಜಾತಿಯಾಗಿದ್ದು, ಹಾಗೆಯೇ ಬರೆಯಿಸಿ ಎಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net